ಆ. 1ರ ಸಂಚಿಕೆಯ `ಸಂಗತ~ದಲ್ಲಿ ಪ್ರಕಟವಾದ ಆರೆಸ್ಸೆಸ್ ಪ್ರಮುಖ ವಿ. ನಾಗರಾಜ್‌ರ `ರಾಜಕೀಯ ಏರಿಳಿತ: ಆರೆಸ್ಸೆಸ್ ಆಘಾತ~ ಲೇಖನ ಓದಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ಗೊಂದಲ ಅಥವಾ ಅದನ್ನು ಪರಿಹರಿಸುವ ದಿಸೆಯಲ್ಲಿ ಆರೆಸ್ಸೆಸ್ಸ್ ಪಾತ್ರದ ಬಗ್ಗೆ ಅವರ ಅಭಿಪ್ರಾಯ ಅತ್ಯಂತ ಸೂಕ್ತ. ಬಿಜೆಪಿಯ ಹೆಚ್ಚಿನ ನಾಯಕರು, ಕಾರ್ಯಕರ್ತರು ಸಂಘದ ಸ್ವಯಂ ಸೇವಕರಾಗಿರಬಹುದು. ಆ ಪಕ್ಷದ ಇತ್ತೀಚಿನ ನಾಯಕರನ್ನು ಕುರಿತು ಇದನ್ನು ಹೇಳುವುದು ಅಸಾಧ್ಯ.
ಇವೆಲ್ಲದರ ಸ್ಪಷ್ಟ ಅಭಿಪ್ರಾಯ - ಬಿಜೆಪಿ ಅಥವಾ ಸಂಘದ ಹಿನ್ನೆಲೆಯಿಂದ ಬಂದ ಯಾವುದೇ ಸಂಘಟನೆಯಾಗಲೀ ಸರಿದಾರಿಯಲ್ಲಿ ನಡೆಯದಿದ್ದರೆ ಅದರ ಪರಿಣಾಮ ಅವರೇ ಅನುಭವಿಸಬೇಕೇ ಹೊರತು ಅದಕ್ಕೆ ಆರೆಸ್ಸೆಸ್ ಕಾರಣವೂ ಅಲ್ಲ. ಅದನ್ನು ಸರಿಪಡಿಸುವ ಹೊಣೆಗಾರಿಕೆ ಸಂಘದ್ದೂ ಅಲ್ಲ ಎಂಬುದಾಗಿದೆ.
ಹಾಗಾಗಿ ಬಿಜೆಪಿಯ ಎಲ್ಲಾ ಗೊಂದಲಗಳನ್ನೂ ಸಂಘದ ಹಿರಿಯರು ಬಗೆಹರಿಸಬೇಕು ಎಂದು ಜನ ಅಪೇಕ್ಷೆ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ. ಬಿಜೆಪಿಗೆ ತನ್ನದೇ ಆದ ನೀತಿ, ಮಾರ್ಗ ಇದೆ - ಅದರಂತೆ ನಡೆದರೆ ಜನ ಅದನ್ನು ಬೆಂಬಲಿಸುತ್ತಾರೆ. ಇಲ್ಲದಿದ್ದರೆ ಮುಂದೆ ಪಾಠ ಕಲಿಸುತ್ತಾರೆ. ಇದು ಆರೆಸ್ಸೆಸ್ಸಿನ ಸ್ಪಷ್ಟ ನಿರ್ಧಾರ ಎಂಬುದನ್ನು ಲೇಖಕರು ಯಾವುದೇ ಸಂಶಯಕ್ಕೆ ಅವಕಾಶವಿಲ್ಲದಂತೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.