ADVERTISEMENT

ಇದು ಸರಿಯಲ್ಲ

ಅಂಕಿತಾ, ಬೆಂಗಳೂರು
Published 18 ಫೆಬ್ರುವರಿ 2014, 19:30 IST
Last Updated 18 ಫೆಬ್ರುವರಿ 2014, 19:30 IST

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಗಳಲ್ಲಿ ಪ್ರಯಾಣಿ­ಸುವವರ ಬಳಿಯಿಂದ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಕಳವು ಹೆಚ್ಚುತ್ತಿದೆ.  ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಕಳವು ಎಂದು ದೂರು ಕೊಟ್ಟರೆ ತೆಗೆದು­ಕೊಳ್ಳು­ವು­ದಿಲ್ಲ. ಬದಲಾಗಿ ಕಳೆದು ಹೋಗಿದೆ ಎಂದು ದೂರು ಕೊಡಿ ಎನ್ನುತ್ತಾರೆ.

ಕಾರಣ ತಮ್ಮ ವ್ಯಾಪ್ತಿ­ಯಲ್ಲಿ ಕಳವು ಹೆಚ್ಚುತ್ತಿರುವುದು ಅವ­ರಿಗೆ ಇಷ್ಟ­ವಿಲ್ಲ. ಏಕೆಂದರೆ ಹಿರಿಯ ಅಧಿಕಾರಿ­ಗಳಿಗೆ ಕಳವು ಹೆಚ್ಚುತ್ತಿರುವ ಬಗ್ಗೆ ಸ್ಪಷ್ಟನೆ ನೀಡ­ಬೇಕಾ­ಗುತ್ತದೆ. ಈ ಕಾರಣಕ್ಕೆ    ಅವರು ಕಳೆದು ಹೋಗಿದೆ ಎಂದು ದೂರು ಕೊಡುವಂತೆ ಹೇಳು­ತ್ತಾರೆ. ಮುಖ್ಯಮಂತ್ರಿ­ಯವರು ತರಾಟೆ ತೆಗೆದು­ಕೊಂಡ ಬಳಿಕವೂ ಪೊಲೀಸರ  ಸ್ವಭಾವ ಬದಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.