ADVERTISEMENT

ಇದೆಂಥ ಅಚ್ಚರಿ!!

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST

‘ಶೇ 99.9 ರಷ್ಟು ಫ್ಲೆಕ್ಸ್ ತೆರವು’ ಎಂಬ ಸುದ್ದಿ (ಪ್ರ.ವಾ., ಮಾರ್ಚ್‌ 30) ಪ್ರಕಟವಾಗಿದೆ. ಇದು ನಿಜವೇ? ಅದೂ ಒಂದೇ ದಿನದಲ್ಲಿ. ನಗರದಲ್ಲಿನ ಎಲ್ಲಾ ಫ್ಲೆಕ್ಸ್‌ಗಳು, ಬ್ಯಾನರ್‌ಗಳು, ಗೋಡೆಗಳ ಮೇಲೆ ಅಂಟಿಸಿದ್ದ ನಾಮಫಲಕಗಳು ಹಾಗೂ ಸರ್ಕಾರಿ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.

ನ್ಯಾಯಾಲಯಗಳು, ಪಾಲಿಕೆ ಅಧಿಕಾರಿಗಳು, ಮಂತ್ರಿ– ಮಹೋದಯರು ಆದೇಶ ಕೊಟ್ಟರೂ ಹಲವಾರು ವರ್ಷಗಳಿಂದ ತೆಗೆಯಲಾಗದವುಗಳನ್ನು ಈಗ ಒಂದೇ ದಿನದಲ್ಲಿ ತೆರವು ಮಾಡಿರಬೇಕಾದರೆ ಅದಕ್ಕೆ ಚುನಾವಣಾ ಆಯೋಗದ ಚಾಟಿಯೇ ಕಾರಣ. ಇಷ್ಟು ದಿನ ಬೇಜವಾಬ್ದಾರಿಯಿಂದ ಇದ್ದ ಬಿಬಿಎಂಪಿಯ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ‘ಧೈರ್ಯ’ ಯಾರಿಗಾದರೂ ಇದೆಯೇ?
–ಕೆ.ಎನ್. ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT