ADVERTISEMENT

ಇವರು ಅಲ್ಪಸಂಖ್ಯಾತರೇ?

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST

ಸ್ವಾತಂತ್ರ್ಯ ನಂತರದ ಕರ್ನಾಟಕದ ಆಡಳಿತಗಾರರಲ್ಲಿ ಬಹುತೇಕರು ಲಿಂಗಾಯತರು, ವೀರಶೈವರು.

ಉದಾಹರಣೆಗೆ, ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ವೀರೇಂದ್ರ ಪಾಟೀಲ, ಎಸ್‌.ಆರ್‌. ಬೊಮ್ಮಾಯಿ, ಜೆ.ಎಚ್‌. ಪಟೇಲ್‌, ಬಿ.ಎಸ್‌. ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್‌. ಅಲ್ಲದೆ ನೂರಾರು ಜನ ಮಂತ್ರಿಗಳು, ನೂರಾರು ಐ.ಪಿ.ಎಸ್., ಐ.ಎ.ಎಸ್., ಕೆ.ಎ.ಎಸ್., ಐ.ಎಫ್.ಎಸ್. ಅಧಿಕಾರಿಗಳು. ಸಾವಿರಾರು ಜನ ಭೂಒಡೆಯರು, ಉದ್ಯಮಿಗಳು... ಹೀಗೆ ಪಟ್ಟಿ ಬೆಳೆಯುತ್ತದೆ.

ನಮ್ಮ ರಾಜ್ಯದ ಮೇಲೆ, ಅಧಿಕಾರದ ಮೇಲೆ ಈ ಸಮುದಾಯದ ಹಿಡಿತವಿರುವುದು ಸತ್ಯ. ಹೀಗಿರುವಾಗ ಇವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ ಸವಲತ್ತುಗಳನ್ನು ನೀಡುವುದು ಹೇಗೆ? ಸಮಾಜವಾದಿ ನೆಲೆಯಿಂದ ಬಂದವರು, ಲೋಹಿಯಾ ವಾದವನ್ನು ಗಾಳಿಗೆ ತೂರಿ ಇಂಥ ಮೌಢ್ಯ ತೋರಿಸುವುದು ನಿಜಕ್ಕೂ ಆಶ್ಚರ್ಯ.

ADVERTISEMENT

ಕೇಂದ್ರ ಸರ್ಕಾರವು ಕವಡೆ ಕಾಸಿನ ಕಿಮ್ಮತ್ತು ನೀಡದೆ ಈ ಪ್ರಸ್ತಾವವನ್ನು ವಾಪಸ್‌ ಕಳಿಸಬೇಕು. ನಿಜವಾಗಿಯೂ ಹಿಂದುಳಿದವರು, ಬಡತನ ರೇಖೆಯ ಕೆಳಗಿರುವವರು, ದೀನ ದಲಿತರು, ಅಹಿಂದ ವರ್ಗದವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು.

– ಎನ್. ಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.