ADVERTISEMENT

ಒಂದು ಹೆಚ್ಚು, ಮತ್ತೊಂದು?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST

‘ಮಠಗಳಿಂದ ದೂರ ಇರುವ ನಾನು, ನಾಡಿನ ಮೂರು ಮಠಗಳಿಗೆ ಮಾತ್ರ ಹೋಗುತ್ತೇನೆ. ತೋಂಟದಾರ್ಯ ಮಠ, ಸುತ್ತೂರು ಮಠ ಹಾಗೂ ಉಡುಪಿಯ ಪೇಜಾವರ ಮಠದೊಂದಿಗೆ ನಂಟಿದೆ’ (ಪ್ರ.ವಾ., ಅ.22) ಎಂದು ಹೇಳಿರುವ ಚಂಪಾ ಅವರ ನುಡಿಗಳನ್ನು ಓದುತ್ತಿದ್ದಂತೆಯೇ, ಕರ್ನಾಟಕ ರಾಜ್ಯದಲ್ಲಿರುವ ಹತ್ತಾರು ಮಠಗಳಲ್ಲಿ ಈ ಮೂರು ಮಠಗಳು ಮಾತ್ರ ಹೇಗೆ ಮತ್ತು ಏಕೆ ಚಂಪಾ ಅವರ ನಂಟಿಗೆ ಕಾರಣವಾದವು ಎಂಬ ಪ್ರಶ್ನೆ ಕಾಡತೊಡಗಿತು.

ಆಯಾಯ ಜಾತಿಯ ಅಡಿಪಾಯದ ಮೇಲೆ ಕಟ್ಟಿರುವ ಪ್ರತಿಯೊಂದು ಮಠವೂ ತನ್ನ ಜಾತಿಗೆ ಸೇರಿದ ಜನಗಳನ್ನು ಒಗ್ಗೂಡಿಸುವ ಮತ್ತು ತನ್ನ ಜಾತಿಯ ಜನರ ಏಳಿಗೆಗಾಗಿ ಕಂಕಣಬದ್ಧವಾಗಿದೆ. ಮಠಗಳು ಅನ್ನದಾನ, ವಿದ್ಯಾದಾನ ಮುಂತಾದ ಜನಪರ ಕೆಲಸಗಳನ್ನು ಜಾತಿಮತಗಳನ್ನು ಪರಿಗಣಿಸದೆ ಮಾಡುತ್ತಿದ್ದರೂ, ಆಯಾಯ ಜಾತಿಯ ಸಿರಿವಂತರ ಬೆಂಬಲದಿಂದ ಪ್ರವರ್ಧಮಾನಕ್ಕೆ ಬಂದಂತೆಲ್ಲಾ ಜಾತಿಯ ವಿಷಬೇರುಗಳು ಜನಮನದಲ್ಲಿ ಮತ್ತಷ್ಟು ಆಳವಾಗಿ ಬೇರೂರಿ, ಬಹು ಬಗೆ ಸಾಮಾಜಿಕ ಕೇಡುಗಳಿಗೆ ಕಾರಣವಾಗುತ್ತಿರುವ ವಾಸ್ತವ ಸಂಗತಿಗಳು ಚಂಪಾ ಅವರನ್ನು ಕಾಡುತ್ತಿಲ್ಲವೇ?

–ಸಿ.ಪಿ. ನಾಗರಾಜ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.