ADVERTISEMENT

ಒಪ್ಪಲಾಗದ ವಾದ

ಶ್ರಿನಿವಾಸ ಕಾರ್ಕಳ, ಮಂಗಳೂರು
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಹಿಂದೂ ಧರ್ಮದ ಆಚರಣೆಗಳನ್ನಷ್ಟೇ ವಿರೋಧಿಸಲಾಗುತ್ತಿದೆ. ಎಲ್ಲ ಅನಿಷ್ಟ ಪದ್ಧತಿಗಳಿಗೂ ಹಿಂದೂ ಧರ್ಮ ಹಾಗೂ ಪುರೋಹಿತಶಾಹಿಯನ್ನೇ ಹೊಣೆಯಾಗಿಸುವ ಹುನ್ನಾರ ನಡೆಯುತ್ತಿದೆ~ ಎಂದು ಬೆಂಗಳೂರಿನಲ್ಲಿ ನಡೆದ `ಮಡೆಸ್ನಾನ: ಒಂದು ಸಂವಾದ~ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಪ್ರತಿಪಾದಿಸಿದ್ದಾರೆ.

ಶ್ರೀಗಳ ವಾದ ಒಪ್ಪುವಂಥದ್ದಲ್ಲ. ಯಾವುದೇ ಧರ್ಮದೊಳಗೆ ಇರಬಹುದಾದ ಹುಳುಕುಗಳನ್ನು ಎತ್ತಿ ತೋರಿಸುವುದು, ಬದಲಾವಣೆಗೆ ಆಗ್ರಹಿಸುವುದು ಆಯಾ ಧರ್ಮೀಯರಿಗೆ ಬಿಟ್ಟ ವಿಚಾರ. ಅದು ಅವರ ಹಕ್ಕು.

ಈ ಅರ್ಥದಲ್ಲಿ, ಹಿಂದೂ ಧರ್ಮವನ್ನು ಪರಿಷ್ಕರಿಸುವ ಕೆಲಸವನ್ನು ಹಿಂದೂಗಳು ಮಾಡಬೇಕು, ಅದೇ ರೀತಿ ಮುಸ್ಲಿಂ ಧರ್ಮವನ್ನು ಪರಿಷ್ಕರಿಸುವ ಕೆಲಸವನ್ನು ಮುಸ್ಲಿಮರು ಮಾಡಬೇಕು.

ಅನ್ಯಾಯ, ಅಸಮಾನತೆಗಳನ್ನೇ ತಳಹದಿಯನ್ನಾಗಿಸಿಕೊಂಡ ಅಸಂಖ್ಯ ವಿಚಾರಗಳು ಮತ್ತು ಆಚಾರಗಳು ಹಿಂದೂ ಧರ್ಮವನ್ನು ಅಪ್ರಸ್ತುತಗೊಳಿಸುತ್ತಿರುವಾಗ, ಅಂತಹ ಲೋಪದೋಷಗಳನ್ನು ಹಿಂದೂಗಳೇ ಪ್ರಶ್ನಿಸುತ್ತಾ, ಪರಿಷ್ಕರಿಸಲು ಆಗ್ರಹಿಸುತ್ತಿದ್ದಾರೆಂದರೆ ಅದನ್ನು ಒಂದು ಆರೋಗ್ಯಕರ ಬೆಳವಣಿಗೆ ಎಂದೇ ಸ್ವೀಕರಿಸಬೇಕೇ ಹೊರತು ಧರ್ಮಕ್ಕೆ ಹಾನಿ ತರುವ ಚಟುವಟಿಕೆ ಎಂದು ಭಾವಿಸಬೇಕಿಲ್ಲ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.