ADVERTISEMENT

ಕಳವಳದ ಸಂಗತಿ

ಸಂಗಪ್ಪ ಗಾಣಿಗೇರ, ಹುನಗುಂದ
Published 11 ಡಿಸೆಂಬರ್ 2015, 19:30 IST
Last Updated 11 ಡಿಸೆಂಬರ್ 2015, 19:30 IST

‘ದುರ್ಬಲ ಮನಸ್ಸಿನವರ ಆತ್ಮಹತ್ಯೆಗೆ ಅನ್ಯರು ಕಾರಣವಲ್ಲ’ (ಪ್ರ.ವಾ., ಡಿ. 8) ಎಂಬ ಸುದ್ದಿ ಓದಿ ಮನ ಕಲಕಿತು. ಹೈಕೋರ್ಟ್‌ ನ್ಯಾಯಮೂರ್ತಿಗಳು  ಮೇಲಿನಂತೆ ತೀರ್ಪು ನೀಡಿದ್ದಾರೆ. ಉನ್ನತ ಶಿಕ್ಷಣ ಪಡೆದವರಲ್ಲೂ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳದ ಸಂಗತಿ.

ಸಾಫ್ಟ್‌ವೇರ್‌ ಉದ್ಯೋಗಿಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂಥ ಅವಘಡಗಳನ್ನು ತಡೆಯಲು ಕಾರ್ಪೊರೇಟ್‌ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕೌನ್ಸೆಲಿಂಗ್‌ ವ್ಯವಸ್ಥೆ ಮಾಡಬೇಕು.

ಪದವಿ, ಸಂಬಳವೊಂದೇ ಯಶಸ್ಸಿನ ಮಾನದಂಡ ಅಲ್ಲ. ಜೀವನ ಎದುರಿಸುವ ಕಲೆ ರೂಢಿಸಿಕೊಳ್ಳುವುದು ಮುಖ್ಯ. ಶಿಕ್ಷಣ ನಮ್ಮ ಯುವ ಪೀಳಿಗೆಯನ್ನು ನಿಶ್ಶಕ್ತಗೊಳಿಸಬಾರದು. ಪೋಷಕರು, ಉದ್ಯೋಗದಾತ ಸಂಸ್ಥೆಗಳು  ಇದಕ್ಕೆ ಕಾರಣಗಳನ್ನು ಅರಿಯಲು ಯತ್ನಿಸಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT