ADVERTISEMENT

ಕುಡಿಯುವ ನೀರಿನ ಸಮಸ್ಯೆ

ಕುಂದು ಕೊರತೆ

ಆರ್‌.ಬಾಲರಾಜ್‌
Published 23 ಮಾರ್ಚ್ 2015, 19:30 IST
Last Updated 23 ಮಾರ್ಚ್ 2015, 19:30 IST

ಯಲಹಂಕ ಉಪವಿಭಾಗದ ಕಾಮಾಕ್ಷಮ್ಮ ಬಡಾವಣೆಯ ಮೊದಲನೆ ತಿರುವಿನ ಜನ ಕುಡಿಯುವ ನೀರಿಗಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಏಕೆಂದರೆ ಇಲ್ಲಿನ ರಸ್ತೆಯಲ್ಲಿ  ಸಾರ್ವಜನಿಕ ಕೊಳಾಯಿಗಳ ಸಂಪರ್ಕದ ವ್ಯವಸ್ಥೆ ಇಲ್ಲ. ಇಲ್ಲಿ ಒಂದು ಬೋರ್‌ವೆಲ್‌ ಸುಸ್ಥಿತಿಯಲ್ಲಿದ್ದರೂ ಇದರಿಂದ ನೀರು ಪಡೆಯುವ ಭಾಗ್ಯ ಈ ಭಾಗದ ಜನರಿಗಿಲ್ಲ. ಸಾಕಷ್ಟು ಸಲ ಬಿ.ಬಿ.ಎಂ.ಪಿ.ಯವರಿಗೆ ದೂರು  ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದ ಜನರ ನೀರಿನ ಬವಣೆಯನ್ನು ನೀಗಿಸುವರೆಂದು ಆಶಿಸಬಹುದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.