ADVERTISEMENT

ಕ್ರಿಕೆಟ್‌ಗೆ ವಿದಾಯ ತಂದ ಬೇಸರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ವಿ.ವಿ.ಎಸ್. ಲಕ್ಷ್ಮಣ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವುದು  ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ತಂದಿದೆ. ಕಳೆದ ಐದು ದಶಕಗಳಲ್ಲಿ ವಿಶ್ವಕ್ರಿಕೆಟ್ ಕಂಡ ಕಲಾತ್ಮಕ ಬ್ಯಾಟ್ಸ್‌ಮನ್‌ಗಳು `ಬ್ರಿಯಾನ್ ಲಾರಾ, ಜಿ. ಆರ್. ವಿಶ್ವನಾಥ್ ಮತ್ತು  ಲಕ್ಷ್ಮಣ್ ಎಂದರೆ ತಪ್ಪಾಗಲಾರದು.

ಭಾರತ ಕ್ರಿಕೆಟ್ ಟೀಮಿಗೆ ಎರಡು ತರಹ ಆಯ್ಕೆ ಆಗುತ್ತೆ. ಕೆಲ ಆಟಗಾರರಿಗೆ ಅವರು ಫಾರಂ ಬರುವವರೆವಿಗೂ ಅವಕಾಶ ನೀಡಲಾಗುತ್ತೆ. ಮತ್ತೆ ಕೆಲ ಆಟಗಾರರು ಒಂದು ಇನ್ನಿಂಗ್ಸ್‌ನಲ್ಲಿ ವಿಫಲವಾದರೂ ಮುಂದಿನ ಪಂದ್ಯಕ್ಕೆ ಆಯ್ಕೆ ಆಗುವುದಿಲ್ಲ. ಲಕ್ಷ್ಮಣ್ ಎರಡನೆ ಪಟ್ಟಿಗೆ ಸೇರುತ್ತಾರೆ. ಈ ಸೌಮ್ಯ ಆಟಗಾರನನ್ನು ಕ್ರಿಕೆಟ್ ಮಂಡಳಿ ಸರಿಯಾಗಿ ಅವಕಾಶ ನೀಡದೆ ವಂಚಿಸಿದ್ದಾರೆ ಎಂಬುದು ಅನೇಕರ ಅಭಿಪ್ರಾಯ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.