ADVERTISEMENT

ಕ್ರೀಡೆಯಲ್ಲಿ ಕಾಂಡೊಂ ಲೆಕ್ಕ!

ಎಲ್.ಎಚ್.ಅರುಣಕುಮಾರ್, ದಾವಣಗೆರೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ
ಕಾಂಡೊಂಗಳ ಬಳಕೆ
(ಪ್ರ.ವಾ. ಮಾ. 7)
ಲೆಕ್ಕ ಕೊಟ್ಟವರು ಸದ್ಯ
ಕಾಂಡೊಂರಹಿತ ರತಿಕ್ರೀಡೆಗಳ
ಹಣಾಹಣಿಗಳನ್ನು ಬಣ್ಣಿಸುವ
ಸಾಹಸಕ್ಕೆ ಕೈಹಾಕಿದಂತಿಲ್ಲ!
ಸೋಲಿಲ್ಲದ, ಗೆಲುವಿಲ್ಲದ,
ಪದಕಗಳ ಬೆಂಬತ್ತಿ ನಿಲ್ಲದ
ಸೆಣಸಾಟಕ್ಕೆ ಅಂಕಿ-ಸಂಖ್ಯೆಗಳ
ಚೌಕಟ್ಟು ಸಾಧ್ಯವೇ?
ಅರಿವೆಯನು ಕಳಚಿ
ಅರಿವ ಮೊರೆ ಹೋದವರ
ಹರಿವನ್ನು ಅಳೆಯುವುದು
ವಿಹಿತವೇ?


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.