ADVERTISEMENT

ಟಿಪ್ಪುಜಯಂತಿ– ವಿವೇಕ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಟಿಪ್ಪುಜಯಂತಿ– ವಿವೇಕ
ಟಿಪ್ಪುಜಯಂತಿ– ವಿವೇಕ   

ಟಿಪ್ಪು ಜಯಂತಿ ಎನ್ನತ್ತಾ ಅಲ್ಪಸಂಖ್ಯಾತರ ಓಟು ಗಿಟ್ಟಿಸಬಹುದೆಂಬ ಕಾಂಗ್ರೆಸ್ ಲೆಕ್ಕಾಚಾರವನ್ನು, ‘ಸಾಂಪ್ರದಾಯಿಕ’ ಮೂಢತನವೆಂದು ಪರಿಗಣಿಸುವಷ್ಟು ಪ್ರಬುದ್ಧವಾಗಿದೆ, ಪ್ರಸಕ್ತ ಜನತೆ.

ಅಲ್ಪಸಂಖ್ಯಾತರ ಓಲೈಕೆಯೆಂಬ ಬಿಳಲು ಸಹಾಯಕ್ಕೆ ಬರುವ ಕಾಲ ಹಿಂದಕ್ಕಾಯಿತು, ಈಗ ಪಕ್ಷದ ತಾಯಿ ಬೇರೇ ದುರ್ಬಲವಾಗಿದೆ. ಅದು ದೊಡ್ಡದು ಮಾಡಿ ಹೇಳಹೋಗುವ ಸುಲ್ತಾನ್ ದೂರದೃಷ್ಟಿ, ಆಡಳಿತ ಜಾಣ್ಮೆ ಮತ್ತು ದೇಶಭಕ್ತಿಯಾಗಲೀ, ಬಿಜೆಪಿ ಪಟ್ಟು ಹಿಡಿದು ವಿರೋಧಿಸುವ ಟಿಪ್ಪು ಮತಾಂಧತೆ ಮತ್ತು ಸ್ವಾರ್ಥವಾಗಲೀ, ಇಂದು ಕೇವಲ ಸಮಯದ ರಾಜಕೀಯವೆಂಬುದು ಜನರು ಬಲ್ಲ ಸಂಗತಿ.

ಇವೆರಡೂ ಟಿಪ್ಪುಸುಲ್ತಾನ್ ಎಂಬ ಆಡಳಿತಗಾರನೊಬ್ಬನ ನೈಜ ವ್ಯಕ್ತಿತ್ವಕ್ಕೆ ಹೊಸದೊಂದು ಆಭೂಷಣವನ್ನೂ ತಂದುಕೊಡುವುದಿಲ್ಲ; ಧಕ್ಕೆಯನ್ನೂ ಉಂಟುಮಾಡುವುದಿಲ್ಲ.

ADVERTISEMENT

ಪ್ರೀತಿಗಾಗಲೀ, ರೋಷಕ್ಕಾಗಲೀ ಟಿಪ್ಪು ಹೆಸರು ಹಳೇ ಮೈಸೂರಿಗಷ್ಟೇ ಸೀಮಿತವಾಗಿದ್ದು, ನಿಜಾಂ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಜನತೆಗೆ ಇದರೊಡನೆ ಭಾವನಾತ್ಮಕ ಸಂಬಂಧ ಅಷ್ಟಾಗಿ ಇಲ್ಲ. ಉತ್ತರದ ಮುಸಲ್ಮಾನರಿಗೆ ಸಹ ಟಿಪ್ಪುಸುಲ್ತಾನ್ ಅಷ್ಟಾಗಿ ಆರಾಧ್ಯ ಎನಿಸುವುದಿಲ್ಲ. ಆದ್ದರಿಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಪಕ್ಷದ ವರ್ಚಿಸ್ಸಿಗಾಗಿ ಟಿಪ್ಪು ಹೆಸರಿನ ಬಳಕೆಯ ವ್ಯರ್ಥಪ್ರಯತ್ನ ಕೈಬಿಡುವುದೊಳಿತು. ಹಾಗಂತ ಡಂಗೂರವನ್ನೂ ಸಾರಬೇಕಾದ್ದಿಲ್ಲ. ಕ್ವಚಿತ್ತಾಗಿ ಇದ್ದುಬಿಡುವುದು ವಿವೇಕವೆನಿಸೀತು.

-ಆರ್. ಕೆ. ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.