ADVERTISEMENT

ತಂಗುದಾಣ ನಿರ್ಮಿಸಿ

ವಿ.ಹೇಮಂತ ಕುಮಾರ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಕೊತ್ತನೂರು ದಿಣ್ಣೆ ಮುಖ್ಯ ರಸ್ತೆಯ ಬಿ. ಕೆ. ಸರ್ಕಲ್ ಬಸ್ ನಿಲ್ದಾಣದಲ್ಲಿ ದಿನವೂ ನೂರಾರು ಬಸ್ಸುಗಳಲ್ಲಿ ಸಾವಿರಾರು ಪ್ರಯಾಣಿಕರು ಮೆಜೆಸ್ಟಿಕ್. ಸಿಟಿ ಮಾರುಕಟ್ಟೆ, ಶಿವಾಜಿನಗರ, ಜಯನಗರದ ಕಡೆಗೆ ಪ್ರಯಾಣಿಸುವವರಾಗಿದ್ದು ಈ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ಸೂಕ್ತವಾದ  ತಂಗುದಾಣವಿಲ್ಲ.

ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ವಯೋವೃದ್ಧರು, ಹೆಂಗಸರು, ಮಕ್ಕಳಿಗೂ ತುಂಬಾ ತೊಂದರೆಯಾಗಿರುತ್ತೆ.

ಬರುವ ಬಸ್ಸಿಗಾಗಿ ಕಾಯುವ ಪ್ರಯಾಣಿಕರ ಬೆವರಿಳಿಯುತ್ತಿರುವ ಮುಖ ಕಾಣುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿರುತ್ತದೆ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಸ್ಥಳ ಪರಿಶೀಲಿಸಿ ಸೂಕ್ತ ಕಂಡ ಎರಡೂ ಬದಿಗಳಲ್ಲಿ ತಂಗುದಾಣವನ್ನು ನಿರ್ಮಿಸಿ ಪ್ರಯಾಣಿಕರಿಗೆ ಸೂಕ್ತವಾದ  ವ್ಯವಸ್ಥೆಯನ್ನು ನಿರ್ಮಿಸಿ ಾಡಿಕೊಡಬೇಕು ಎಂಬುದು  ನನ್ನ ಮನವಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.