ADVERTISEMENT

ತಿಳಿಯದೆ ಹೇಳುವುದು ತರವಲ್ಲ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

 `ಅರಿಯದೆ ಆಡುವುದು ತರವಲ್ಲ~ ( ವಾವಾ ಸೆ. 9) ಜಿ.ವಿ. ಗಣೇಶಯ್ಯನವರ ಪತ್ರಕ್ಕೆ ಪ್ರತಿಕ್ರಿಯೆ. ಹೌದು ಯಾವುದನ್ನೂ ಅರಿಯದೆ ಆಡುವುದು ತರವಲ್ಲ!

1) ಹವನಾದಿಗಳಲ್ಲಿ ಉಪಯೋಗಿಸುವ ಸವಿತ್ತುಗಳಿಂದ ವಾತಾವರಣಕ್ಕೆ ಏನೆಲ್ಲ ಲಾಭವಾಗುತ್ತದೆ ಎಂಬುದನ್ನು ಯಾವ ವಿಜ್ಞಾನಿಗಳು ಸಂಶೋಧನೆ ನಡೆಸಿ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ ಹೇಳಬಲ್ಲಿರಾ?
2) ಸೊಳ್ಳೆ ನಿವಾರಕ ಸುರುಳಿ ನೂರು ಸಿಗರೇಟ್ ಸುಟ್ಟಷ್ಟೇ ಅನರ್ಥಕಾರಿ ಎಂದು ಎಲ್ಲಿ ಸಾಬೀತಾಗಿದೆ ಎಂಬ ವಿವರಗಳನ್ನು ಕೊಡುವಿರಾ!
3) ಬೇಡವೆಂದರೆ ಪ್ರಯೋಗಿಸಿ ಅಸ್ತ್ರವನ್ನು ಉಪಸಂಹರಿಸುವ ಕ್ರಮ ಪೌರಾಣಿಕ ಕಥೆಗಳಲ್ಲಿ ವಿನಾ ಬೇರೆ ಎಲ್ಲಿ ಇತ್ತು ಎಂಬ ವಿವರಗಳನ್ನು ಕೊಡಬಲ್ಲಿರಾ?
4) ಸಾವಿರಾರು ವರ್ಷಗಳ ಹಿಂದೆ ರಚಿಸಲಾದ ನಾಡಿ ಗ್ರಂಥದಲ್ಲಿ ಭವಿಷ್ಯವನ್ನು ಹೆಸರುಗಳೊಂದಿಗೆ ನಿಖರವಾಗಿ ಬಿಚ್ಚಿಟ್ಟಿರುವ ವಿವರಗಳನ್ನು ದಯಪಾಲಿಸುವಿರಾ?
ನಿಮ್ಮ ಮಾತು ~ಅರಿಯದೆ ಆಡುವುದು ತರವಲ್ಲ~ ಎಂಬುದು ನಿಮಗೆ ತಿರುಗುಬಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.