ಜೆ.ಪಿ. ನಗರ 2ನೇ ಹಂತ, ಮಾರೇಮಹಳ್ಳಿ 24ನೇ ಮೈನ್, 2ನೇ ಕ್ರಾಸ್ ಇಲ್ಲಿ ಸಾರ್ವಜನಿಕ ಗ್ರಂಥಾಲಯ ಇರುತ್ತದೆ. ಗ್ರಂಥಾಲಯ ಮೊದಲನೆ ಮಹಡಿಯಲ್ಲಿ ಇರುತ್ತದೆ. ಮೆಟ್ಟಿಲು ಹತ್ತುವ ಜಾಗಕ್ಕೆ ಹೊಂದಿಕೊಂಡಂತೆ ಚಿಕ್ಕದಾದ ಟೀ ಅಂಗಡಿ ಇರುತ್ತದೆ. ಈ ಅಂಗಡಿಯಲ್ಲಿ ಸಿಗರೇಟ್, ಪಾನ್ ಎಲ್ಲಾ ದೊರೆಯುತ್ತದೆ. ಟೀ ಕುಡಿಯಲು ಬಂದ ಜನರು ಸಿಗರೇಟ್ ಸೇದುವುದರಿಂದ ಅಲ್ಲದೆ ಗ್ರಂಥಾಲಯದ ಮೆಟ್ಟಿಲುಗಳ ಮೇಲೆ ನಿಂತುಕೊಂಡು, ಕೆಲವು ಸಾರಿ ಕುಳಿತುಕೊಂಡು ಸಿಗರೇಟು ಸೇದುವುದರಿಂದ ಗ್ರಂಥಾಲಯದ ಒಳಗೆ ವಾಸನೆ ಇರುತ್ತದೆ. ಸಿಗರೇಟು ಸೇದಿಕೊಂಡು ಜನಗಳು ಅಲ್ಲಿಯೇ ನಿಂತಿರುವುದರಿಂದ ಗ್ರಂಥಾಲಯದ ಒಳಗೆ ಹೋಗುವುದಕ್ಕೆ ಆಗುವುದಿಲ್ಲ. ಆದ್ದರಿಂದ ಸಂಬಂಧಪಟ್ಟವರು ಸರಿಪಡಿಸಬೇಕಾಗಿ ವಿನಂತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.