ADVERTISEMENT

ಧ್ವಜಾರೋಹಣಕ್ಕೂ ಭತ್ಯೆ ಬೇಕೇ?

ಎಂ.ಎನ್.ಸ್ವಾಮಿ, ಬೆಂಗಳೂರು
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

‘ಧ್ವಜಾರೋಹಣಕ್ಕೆ ರೂ 6 ಕೋಟಿ ಖರ್ಚು’ (ಪ್ರ.ವಾ. ಸೆ. 23)  ಓದಿದಾಗ  ನಮ್ಮ ಸರ್ಕಾರಿ ನೌಕರರ ದೇಶಭಕ್ತಿ ಎಂತಹದ್ದು ಎಂದು ಗೊತ್ತಾಯಿತು! ಧ್ವಜಾರೋಹಣ ಮಾಡಲೂ ನಿತ್ಯ ತಲಾ 30 ರೂಪಾಯಿಗಳ ಭತ್ಯೆ ಕೊಟ್ಟರೆ ಸ್ವಾತಂತ್ರ್ಯ ತಂದುಕೊಟ್ಟಂತಹ ಪುಣ್ಯಾತ್ಮರಿಗೆ ಇನ್ನೆಷ್ಟು ಭತ್ಯೆ ಕೊಡಬೇಕಾಗಿತ್ತು, ಕೊಡಬೇಕಾಗಬಹುದು!

ಪಂಚಾಯಿತಿಗಳಲ್ಲಿ  ಸರ್ಕಾರಿ ನೌಕರರೇ ಕೆಲಸ ಮಾಡುತ್ತಿದ್ದಾರೆ.  ಇವರಿಗೆ ಸರ್ಕಾರ ಸಂಬಳ ಕೊಡುತ್ತಿದೆ.    ಧ್ವಜಾರೋಹಣಕ್ಕೆ ಪ್ರತ್ಯೇಕ ಭತ್ಯೆ ಕೊಡುವಂತೆ ಸರ್ಕಾರ ಆದೇಶ ನೀಡಿರುವುದು  ವಿಪರ್ಯಾಸ. ಅಭಿಮಾನದ ಕೆಲಸವನ್ನು ಪ್ರೀತಿಯಿಂದ ಮಾಡಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.