ಎಚ್ಎಂಟಿ ಮೆಷಿನ್ ಟೂಲ್ಸ್ ವಿಭಾಗದ ನೌಕರರಿಗೆ ನಿವೃತ್ತಿ ವಯಸ್ಸು ಏರಿಸಿ, 1997ರ ವೇತನ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ (ಪ್ರ.ವಾ.ಮಾರ್ಚ್ 1) ಸಂತಸದ ವಿಷಯ! ಆದರೆ ಎಚ್‌ಎಂಟಿಯ ಗಡಿಯಾರ ವಿಭಾಗದ ನೌಕರರಿಗೆ ‘ವಿಷ’ ನೀಡಿದೆ.
ಗಡಿಯಾರ ವಿಭಾಗವು ಲಾಭದಲ್ಲಿದ್ದಾಗ, ನಷ್ಟದಲ್ಲಿದ್ದ ಮೆಷಿನ್ ಟೂಲ್ಸ್ ವಿಭಾಗದ ನೌಕರರಿಗೆ ಸಂಬಳ ನೀಡುತ್ತಿತ್ತು! ಗಡಿಯಾರ ವಿಭಾಗವು ನಷ್ಟಕ್ಕೆ ಒಳಗಾದಾಗ ಮೆಷಿನ್ ಟೂಲ್ಸ್ ಮತ್ತು ಗಡಿಯಾರ ವಿಭಾಗವನ್ನೇ ಬೇರೆ ಅಂದರೆ ಎಚ್‌ಎಂಟಿ ಲಿಮಿಟೆಡ್ ಬೇರೆ, ಎಚ್ಎಂಟಿ ವಾಚಸ್ ಲಿಮಿಟೆಡ್ ಬೇರೆಯಾಗಿ ಮಾಡಲಾಯ್ತು! ಗಡಿಯಾರ ವಿಭಾಗಕ್ಕೆ ನಿವೃತ್ತಿ ವಯಸ್ಸು ಏರಿಕೆಯೂ ಇಲ್ಲ, ವೇತನ ಪರಿಷ್ಕರಣೆಯೂ ಇಲ್ಲ.
ಜೊತೆಗೆ ಕಳೆದ ಏಪ್ರಿಲ್‌ನಿಂದ ಅಂದರೆ 11 ತಿಂಗಳುಗಳಿಂದ ವೇತನವಿಲ್ಲ! 2003ಕ್ಕೂ ಹಿಂದೆ ‘ಸ್ವಯಂ ನಿವೃತ್ತಿ’ ಹೆಸರಲ್ಲಿ ಹೊರದೂಡಿದ ನೌಕರರಲ್ಲಿ ಆತ್ಮಹತ್ಯೆಗೆ ಒಳಗಾದವರ ಲೆಕ್ಕವಿಲ್ಲ! ಇದಕ್ಕೆಲ್ಲ ಯಾರು ಹೊಣೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.