ADVERTISEMENT

ನಾಡಗೀತೆ ಮೂಲ ಧಾಟಿ ಯಾವುದು?

ಆರ್.ಕೆ.ದಿವಾಕರ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ನಾಡಗೀತೆಯ ಧಾಟಿ~ ಗುರ್ತಿಸಬೇಕೆಂಬ ವೈ.ಕೆ. ಮುದ್ದುಕೃಷ್ಣ ಅವರ ಕಳಕಳಿ ಈಡೇರುವುದು ಸಾಧ್ಯವೇ?

ಕುವೆಂಪು ಅವರಾಗಲೀ, ಹಿರಿಯರಾದ ಜಿಎಸ್‌ಎಸ್ ಅವರಾಗಲೀ ಸಂಗೀತದ ಒಂದು ಮಟ್ಟು ಇಟ್ಟುಕೊಂಡು ಕವಿತೆ ಬರೆದಿದ್ದಾರೆಯೇ? ಅದು ಕವನ. ಅದು `ಭಾವಗೀತೆ~ಯಾಗುವುದು ಸಂಗೀತ ಪ್ರತಿಭೆಯಿಂದ. 

ಪುತಿನ ಅವರು, `ಮಾಡುವವನದಲ್ಲ ಹಾಡು, ಹಾಡುವವನದು~ ಎಂದದ್ದು ಇದಕ್ಕೇ. ಕುವೆಂಪು ಅವರು ಕನ್ನಡ ಭೂಮಿಯನ್ನು ಪರಿಭಾವಿಸಿಕೊಂಡು ಜೈಕಾರ ಹಾಕಿದಾಗ, ಇದೊಂದು ಹಾಡಾಗಲೆಂಬ ಹಾರೈಕೆ ಅವರಲ್ಲಿ ಇದ್ದಿರಲಾರದು.

ಆದರೆ ಕವಿ ರವೀಂದ್ರರ `ಜನಗಣಮನ~ಕ್ಕಾದರೋ ಸಾಹಿತ್ಯವನ್ನೂ ಗೀತೆ ಸ್ವರೂಪವನ್ನೂ ಅವರೇ ರಚಿಸಿರುವುದು. ಅಂತಹ ಮೂಲಧಾಟಿಯನ್ನು ನಮ್ಮ ನಾಡಗೀತೆಗೆ ಎಲ್ಲಿಂದ ತರುವುದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.