ಯಲಹಂಕ ಉಪನಗರದ ಎ ಸೆಕ್ಟರ್ ಅನ್ನು ವ್ಯವಸ್ಥಿತ ಪ್ರದೇಶ ಎನ್ನುವುದುಂಟು. ಆದರೆ ಅಲ್ಲಿ ಕೆಲ ಕಡೆ ಖಾಲಿ ನಿವೇಶನಗಳು ವರ್ಷಗಟ್ಟಲೆಯಿಂದ ಇವೆ. ಪೊದೆಗಳು ದೊಡ್ಡದಾಗಿ ಮಿನಿ ಕಾಡಿನಂತಾಗಿವೆ. ಕಸ ಎಸೆಯುವ ಮುಕ್ತ ತಾಣಗಳಾಗಿವೆ.
ಬಿ.ಬಿ.ಎಂ.ಪಿ.ಯ ಸಹಾಯಕ ಕಾರ್ಯಪಾಲಕ ಎಂಜಿನಿಯರರ ಕಚೇರಿಗೆ ಈ ಸಂಬಂಧ ಹಲವು ಸಲ ಹೋಗಿ ಬಂದಿದ್ದೇನೆ. 2011ರ ಜನೆವರಿ 29ರಂದು ಲಿಖಿತ ದೂರು ನೀಡಿದ್ದೇನೆ. ದಿ. 18-7-11 ರಂದು ಇನ್ನೊಂದು ಪತ್ರ ಬರೆದಿದ್ದೇನೆ.
ಒಮ್ಮೆ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಗೂ ಹೋಗಿ ದೂರುಗಳ ಪ್ರತಿಯನ್ನೂ ನೀಡಿದ್ದೇನೆ. ಖಾಲಿ ನಿವೇಶನದಿಂದ ನೆರೆಹೊರೆಯವರಿಗೆ ಸೊಳ್ಳೆ, ಹಾವುಗಳ ಕಾಟ ಇರದಂತೆ ಕ್ರಮ ಕೈಗೊಳ್ಳುವುದು ಪಾಲಿಕೆ ಅಧಿಕಾರಿಗಳ (ವಾರ್ಡ್ 4, ಯಲಹಂಕ ಉಪನಗರ, ಉಪವಿಭಾಗ) ಕರ್ತವ್ಯ.
ಮುನಿಸಿಪಾಲಿಟಿಗಳೂ ಇಂತಹ ಸಂದರ್ಭಗಳಲ್ಲಿ ನೋಟೀಸ್ ನೀಡಿ, ನಿವೇಶನಗಳನ್ನು ಸ್ವಚ್ಛಗೊಳಿಸಿ, ಮಾಲೀಕರಿಗೆ ಇದರ ವೆಚ್ಚವನ್ನು ಕಂದಾಯದ ಬಾಕಿಯಾಗಿ ನೀಡುವಂತೆ ಸೂಚಿಸಿವೆ. ಬಿ.ಬಿ.ಎಂ.ಪಿ.ಯ ಹಿಂದಿನ ಬಜೆಟ್‌ನಲ್ಲೂ ಈ ಅಂಶ ಸೇರ್ಪಡೆಯಾಗಿದೆ. ಈಗಲಾದರೂ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳುವರೆ?
-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.