ADVERTISEMENT

ನೀರಿಗೆ ಹಾಹಾಕಾರ

ಬೈರಮಂಗಲ ರಾಮೇಗೌಡ
Published 14 ಏಪ್ರಿಲ್ 2014, 19:30 IST
Last Updated 14 ಏಪ್ರಿಲ್ 2014, 19:30 IST

ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ವ್ಯಾಪ್ತಿಗೆ ಬರುವ ಪುಷ್ಪಗಿರಿ ನಗರದಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ. ವಾರದಲ್ಲಿ ಎರಡು ದಿನ, ಎರಡು ಗಂಟೆಗಳ ಕಾಲ ಈ ಬಡಾವಣೆಗೆ ಬರುತ್ತಿದ್ದ ನೀರು ಆಮೇಲೆ ವಾರಕ್ಕೊಂದು ದಿನ ಸಣ್ಣ ಪ್ರಮಾಣದಲ್ಲಿ ಬರುತ್ತಿತ್ತು. ಈಗ ಹನಿ ನೀರೂ ಇಲ್ಲದಂತಾಗಿದೆ.

ಇಲ್ಲಿರುವ ಕೊಳವೆ ಬಾವಿಗಳೆಲ್ಲ ಬಹುಪಾಲು ಬತ್ತಿಹೋಗಿವೆ. ಬೇರೆ ದಾರಿ ಕಾಣದೆ ದುಬಾರಿ ಬೆಲೆಯ ಖಾಸಗಿ ನೀರು ಸರಬರಾಜು ಸಂಸ್ಥೆಗಳಿಗೆ ಶರಣಾಗುವ ಸ್ಥಿತಿ ಇಲ್ಲಿನ ನಿವಾಸಿಗಳದ್ದು. ಈ ಭಾಗದ ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ಜಲಮಂಡಳಿ ಅಧಿಕಾರಿಗಳು ಏನು ಮಾಡುತ್ತಿದ್ದಾರೋ ತಿಳಿಯದು. ಇವರೆಲ್ಲ ದಯಮಾಡಿ ಪುಷ್ಪಗಿರಿ ನಗರ ನಿವಾಸಿಗಳ ಸಂಕಟವನ್ನು ಅರ್ಥ ಮಾಡಿಕೊಂಡು ಇಲ್ಲಿಗೆ ನಿಯಮಿತವಾಗಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.