ADVERTISEMENT

ನೀರಿಲ್ಲದೂರಿನಲ್ಲಿ ನೀರಿನ ವ್ಯಾಪಾರ!

ಬೈರಮಂಗಲ ರಾಮೇಗೌಡ
Published 12 ಮೇ 2014, 19:30 IST
Last Updated 12 ಮೇ 2014, 19:30 IST

ಬನಶಂಕರಿ 3ನೇ ಹಂತದ ಪುಷ್ಪಗಿರಿ ನಗರದಲ್ಲಿ (ಕೆರೆ ಕೋಡಿ) ಕಾವೇರಿ ಜಲ ಸಂಪರ್ಕ ಇದ್ದರೂ ಅಸಮರ್ಪಕ ನೀರು ಪೂರೈಕೆಯಿಂದಾಗಿ ಬಹುಮಟ್ಟಿಗೆ ಇಲ್ಲಿನ ಎಲ್ಲ ಮನೆಗಳವರು ಒಂದೊಂದು ಕೊಳವೆ ಬಾವಿ ಹಾಕಿಸಿಕೊಂಡಿದ್ದಾರೆ. ಈ ಬಾರಿ ಬೇಸಿಗೆಯ ತೀವ್ರತೆಯಿಂದಾಗಿ ಬಹಳಷ್ಟು ಕೊಳವೆಗಳು ಬತ್ತಿಹೋಗಿವೆ.

ಆದರೆ ಇಂಥ ಪರಿಸ್ಥಿತಿಯಲ್ಲಿ ಜಲಮಂಡಲಿಯು ಖಾಸಗಿಯವರೊಬ್ಬರಿಗೆ ಕೊಳವೆ ಬಾವಿಯ ನೀರನ್ನು ತೆಗೆದು ವಾಟರ್‌ ಟ್ಯಾಂಕ್‌ಗಳಲ್ಲಿ ಸಾಗಿಸುವ ವ್ಯಾಪಾರಕ್ಕೆ ಅನುಮತಿ ನೀಡಿರುವುದರಿಂದ ಅಷ್ಟಿಷ್ಟು ನೀರು ಸಿಗುತ್ತಿದ್ದ ಕೊಳವೆ ಬಾವಿ ಮಾಲೀಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜನವಸತಿ ಪ್ರದೇಶದಲ್ಲಿ ನೀರಿನ ವ್ಯಾಪಾರಕ್ಕೆ ಅನುಮತಿ ನೀಡುವ ಜಲಮಂಡಲಿಗೆ ಬುದ್ಧಿ ಇಲ್ಲವೆ? ಸಂಬಂಧಪಟ್ಟವರು ಕೂಡಲೇ ಈ ಗಂಭೀರ ಸಮಸ್ಯೆಗೆ ಸ್ಪಂದಿಸಬೇಕಾಗಿ ವಿನಂತಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.