ADVERTISEMENT

ನೌಕರರ ವೇತನ ಏರಿಕೆ ಯಾವಾಗ?

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಕೇಂದ್ರ ಸರ್ಕಾರದ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗಿ ಆರು ವರ್ಷಗಳಾಗುತ್ತ ಬಂದರೂ ರಾಜ್ಯ ಸರ್ಕಾರದ ನೌಕರರಿಗೆ ಕನಿಷ್ಠ ಮಧ್ಯಂತರ ಪರಿಹಾರವೂ ಪ್ರಾಪ್ತವಾಗಿಲ್ಲ.

ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣ, ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ಎಐಸಿಟಿಇ ಪರಿಷ್ಕೃತ ವೇತನ ಜಾರಿ ಮಾಡಿಯಾಗಿದೆ.

ವಿಶ್ವವಿದ್ಯಾಲಯ, ಪದವಿ ಕಾಲೇಜುಗಳ ಬೋಧಕರಿಗಂತೂ ಬಂಪರ್ ವೇತನ ನಿಗದಿಯಾಗಿದೆ. ವಿದ್ಯುತ್ ನಿಗಮಗಳ ನೌಕರರಿಗೂ ಶೇ.25 ರಷ್ಟು ವೇತನ ಹೆಚ್ಚಳವಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದ್ದರೆ ಬದುಕುವ ಬಗೆ ಎಂತು?  ನೌಕರರ ಸಂಘಟನೆಗಳು ಇಬ್ಬಣಗಳಾಗಿ ಬಡಿದಾಡದೇ ಸರ್ಕಾರದ ಮೇಲೆ ಒತ್ತಡ ಹೇರಿ ವೇತನ ಪರಿಷ್ಕರಣೆ ಮಾಡಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.