
ಪ್ರಜಾವಾಣಿ ವಾರ್ತೆರಾಜ್ಯ ಸರ್ಕಾರದ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಏರಿಸಿ ಮೂರು ವರ್ಷಗಳು ಕಳೆದಿವೆ. ನಿವೃತ್ತಿ ಅಂಚಿಗೆ ಬಂದಿದ್ದ ನೌಕರರಿಗೆ ಎರಡು ವರ್ಷ ಹೆಚ್ಚು ಕೆಲಸ ಮಾಡುವ ಅವಕಾಶ ಸಿಕ್ಕಿ ಆರ್ಥಿಕ ಲಾಭವಾಗಿದೆ. ನಿವೃತ್ತಿಯ ವಯಸ್ಸನ್ನು ಏರಿಸಿದ್ದರಿಂದ ಹುದ್ದೆಗಳು ಸೃಷ್ಟಿಯಾಗದೇ ನಿರುದ್ಯೋಗಿಗಳ ಬವಣೆ ಮುಂದುವರಿದಿದೆ.
ಆದರೆ ಸರ್ಕಾರ, ಆ ಸಮಯದಲ್ಲಿ ನಿರುದ್ಯೋಗಿಗಳನ್ನು ಮರೆತದ್ದು ನೋವಿನ ಸಂಗತಿ. ನಿವೃತ್ತಿ ವಯಸ್ಸು ಏರಿಕೆ ಮಾಡಿದಂತೆ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಲು ಇರುವ ವಯೋಮಿತಿ ಏರಿಕೆ ಮಾಡುವುದು ಸರ್ಕಾರದ ಕರ್ತವ್ಯವಾಗಿತ್ತು. ಈಗಲಾದರೂ ಸರ್ಕಾರ ನಿರುದ್ಯೋಗಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.