ADVERTISEMENT

ಪಿಡಿಒಗಳ ಹೋರಾಟಕ್ಕೆ ಸ್ಪಂದಿಸಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಗ್ರಾ ಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ಪ್ರಾಮಾಣಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಭ್ರಷ್ಟ ಜನಪ್ರತಿನಿಧಿಗಳ ಉಪಟಳವನ್ನು ಸಹಿಸಲಾರದೆ ಅನಿವಾರ್ಯವಾಗಿ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ಹಲವು ಪಿಡಿಒಗಳು ಭ್ರಷ್ಟ ಸದಸ್ಯರ ಪ್ರಭಾವಕ್ಕೆ ಒಳಗಾಗಿ ಮತ್ತೆ ಕೆಲವರು ವ್ಯವಸ್ಥೆಗೆ ಹೊಂದಿಕೊಂಡು ಸಾಕಷ್ಟು ಹಣ ಮಾಡಿಕೊಳ್ಳುತ್ತಿರುವವರೂ ಇದ್ದಾರೆ. ಆದರೆ ಹೊಸ ಪೀಳಿಗೆಯ ಮತ್ತು ಉತ್ತಮ ಸಮಾಜದ ಆದರ್ಶ ಇಟ್ಟುಕೊಂಡು ಕೆಲಸಕ್ಕೆ ಸೇರಿರುವ ಯುವಕರಿಗೆ ಈ ಹುದ್ದೆ ನುಂಗಲೂ ಆಗದ ಉಗಿಯಲೂ ಆಗದ ಬಿಸಿತುಪ್ಪವಾಗಿದೆ. ಕೆಲವರ ಮೇಲೆ ಹಲ್ಲೆ ಮತ್ತು ನಿಂದನೆ ನಿರಂತರವಾಗಿ ನಡೆದಿದೆ. ಆದ್ದರಿಂದಲೇ ಮಹಿಳೆಯೊಬ್ಬರು ನೇಣಿಗೆ ಶರಣಾಗಬೇಕಾಯಿತು.

ಗ್ರಾಮ ಪಂಚಾಯಿತಿಗಳಲ್ಲಿ ಅತಿಯಾಗಿರುವ ಭ್ರಷ್ಟ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ಕಿರುಕುಳದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಪಿಡಿಒಗಳ ಹೋರಾಟವನ್ನು ಜನಪರ ಸಂಘಟನೆಗಳು ಬೆಂಬಲಿಸಬೇಕಾಗಿದೆ. ಸರ್ಕಾರ ಕೂಡ ಪಂಚಾಯಿತಿ ಮಟ್ಟದಲ್ಲಿ ದಿನೇ ದಿನೇ ಬೇರೂರುತ್ತಿರುವ ಕೆಟ್ಟ ವ್ಯವಸ್ಥೆವಿರುದ್ಧ ಕ್ರಮಕೈಗೊಳ್ಳಲು ಮುಂದಾಗಲು ಮನಸ್ಸು ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.