ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಅಂಗವಿಕಲರಿಗೆ ನಿರುದ್ಯೋಗ ಭತ್ಯೆ ನೀಡುವ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಅಂಗವಿಕಲರಿಗೆ ಮದುವೆಗೆ ಸಹಾಯಧನ ನೀಡಲು ಮುಂದಾಗಿದ್ದಾರೆ. ಆದರೆ ಈ ರೀತಿ ಮಾಡುವ ಬದಲು ಅವರಲ್ಲಿರುವ ಪ್ರತಿಭೆಗೆ ತಕ್ಕಂತೆ ಕೆಲಸ ನೀಡಿದರೆ ಅವರಲ್ಲಿರುವ ಕೀಳರಿಮೆ ತೊಲಗಿ ಆತ್ಮವಿಶ್ವಾಸ ಉಂಟಾಗುತ್ತದೆ. ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ.
ನಿಜವಾಗಿಯೂ ಇವರ ಬಗ್ಗೆ ಕಾಳಜಿ ಇದ್ದರೆ ‘ಅಂಗವಿಕಲರ ಸಮಾನ ಅವಕಾಶ ಮತ್ತು ಹಕ್ಕುಗಳ ಕಾಯ್ದೆ ೧೯೯೫’ ಇದನ್ನು ಸರಿಯಾಗಿ ಜಾರಿಗೆ ತರಬೇಕು. ಜೊತೆಗೆ ಸರ್ಕಾರಿ ಕೆಲಸದಲ್ಲಿ ಸಿ ಮತ್ತು ಡಿ ಗುಂಪಿನ ಹುದ್ದೆಗಳಿಗೆ ಶೇ ೫ ಮೀಸಲಾತಿ ಮತ್ತು ಎ.ಬಿ. ವೃಂದದ ಹುದ್ದೆ
ಗಳಿಗೆ ಶೇ ೩ ಮೀಸಲಾತಿ ಕಡ್ಡಾಯವಾಗಿ ಜಾರಿಗೆ ತರಬೇಕು. ಆಗ ಮಾತ್ರ ಅವರ ನಿಜವಾದ ಕಲ್ಯಾಣ ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.