ADVERTISEMENT

ಪ್ರತಿ ವರ್ಷವೂ ಸಾಹಿತ್ಯ ಸಮ್ಮೇಳನಗಳಾಗಲಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST

ಇತ್ತೀಚಿಗಷ್ಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಪುಂಡಲೀಕ ಹಾಲಂಬಿರವರು ಸಭೆ ಸಮಾರಂಭಗಳಲ್ಲಿ ಮೂರು ವರ್ಷಕ್ಕೊಂದು ಸಾರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತೇವೆ ಎಂಬ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೆಷ್ಟು ಸರಿ!

ಜಾಗತೀಕರಣ ಹಾಗೂ ಪರಭಾಷೆಗಳ ಸ್ಪರ್ಧೆಯ ಎದುರು ಕಳೆಗುಂದುತ್ತಿರುವ ಕನ್ನಡವನ್ನು ಸದೃಢವಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಮಹತ್ವಪೂರ್ಣ ಸಂಸ್ಥೆಗಳು ಸಾಕಷ್ಟು ಶ್ರಮಿಸಬೇಕಿದೆ.

ಕನ್ನಡ ಸಾಹಿತ್ಯ ಸಮ್ಮೇಳನಗಳು ನಿಜಕ್ಕೂ ಕನ್ನಡಿಗರನ್ನು ಒಂದುಗೂಡಿಸುವ, ಕನ್ನಡತನವನ್ನು ಮೆರೆಸುವ, ಕನ್ನಡ ಸಾಹಿತ್ಯ ಸಂಸ್ಕೃತಿಗಳನ್ನು ಜಗಜ್ಜಾಹಿರಾಗಿಸುವ ಉತ್ಸವಗಳು. ಇಂತಹ ಉತ್ಸವಗಳನ್ನು, ಹಬ್ಬಗಳನ್ನು ಕನ್ನಡಿಗರು ಮರೆಯದಂತೆ ಪ್ರತಿ ವರ್ಷವೂ ಬೃಹತ್ತಾಗಿ ಎಲ್ಲರೂ ಒಂದಾಗಿ ಆಚರಿಸಬೇಕಿದೆ. ಇದಕ್ಕೆ ವ್ಯತಿರಿಕ್ತವೆಂಬಂತೆ ರಾಜ್ಯಾಧ್ಯಕ್ಷರಾದ ಪುಂಡಲೀಕ ಹಾಲಂಬಿ ಅವರು `ಮೂರು ವರ್ಷಕ್ಕೊಂದು ಸಮ್ಮೇಳನ~ ಎಂಬ ಹೇಳಿಕೆಗಳನ್ನು ಕೊಟ್ಟು ಎಲ್ಲರನ್ನೂ ದಂಗುಬಡಿಸುತ್ತಿದ್ದಾರೆ. ನನ್ನ ಪ್ರಶ್ನೆ ಇಷ್ಟೇ. ಮೂರೇ ವರ್ಷದ ಅವಧಿಯಲ್ಲಿ ಅಧ್ಯಕ್ಷರಾಗುವ ಇವರು ಒಂದೇ ಒಂದು ಸಮ್ಮೇಳನವನ್ನು ನಡೆಸಿದರೆ ಇದರಿಂದ ಕನ್ನಡಿಗರಿಗಾಗುವ ಲಾಭ ಏನು?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.