ADVERTISEMENT

ಪ್ರತ್ಯೇಕ ಧರ್ಮ ಆಗುವುದೆ?

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:30 IST
Last Updated 5 ಅಕ್ಟೋಬರ್ 2017, 19:30 IST

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವವರು ಅದು ಪ್ರತ್ಯೇಕ ಧರ್ಮ ಆಗಲು ಸಾಧ್ಯವೇ ಎಂಬ ಬಗ್ಗೆ ಮೊದಲು ಕಾನೂನು ತಜ್ಞರ ಸಲಹೆ ಪಡೆಯಬೇಕು. ಸಾಂವಿಧಾನಿಕ ಮುದ್ರೆ ಬೀಳುವ ಸಾಧ್ಯತೆಯನ್ನು ಅರಿಯುವ ಮುನ್ನ ನಡೆಯುತ್ತಿರುವ ಈ ಹೋರಾಟದ ಗುರಿ ವೈಯಕ್ತಿಕ ಆಶೋತ್ತರಗಳನ್ನು ಈಡೇರಿಸಿಕೊಳ್ಳುವುದಾಗಿದೆಯೇ ಹೊರತು ಸೈದ್ಧಾಂತಿಕ ಹಾಗೂ ತಾತ್ವಿಕ ನೆಲಗಟ್ಟಿನ ಮೇಲೆ ಧರ್ಮಜಿಜ್ಞಾಸೆಯ ವಿಚಾರಗಳ ಯಾವ ಉದ್ದೇಶಗಳನ್ನೂ ಹೊಂದಿದಂತೆ ಕಾಣುವುದಿಲ್ಲ!

ಪ್ರತ್ಯೇಕ ಧರ್ಮದ ಸ್ಥಾನಕ್ಕಾಗಿ ಹೋರಾಡುತ್ತಿರುವ ಕೆಲವರು ಮಹಾಸಭೆಗೆ ಲಕ್ಷ್ಮಣರೇಖೆಯನ್ನು ಎಳೆಯುವುದು, ವಿರಕ್ತಮಠದ ಸ್ವಾಮಿಗಳನ್ನು ಮಠ ಬಿಟ್ಟು ಹೋಗುವಂತೆ ತೋಳ್ತಟ್ಟಿ ಹೆದರಿಸುವುದು, ತಮಗೆ ಬೇಡವಾದವರಿಗೆ ರಾಷ್ಟ್ರೀಯ ಬಸವದಳದಿಂದ ಬೆದರಿಕೆ ಹಾಕಿಸುವು
ದನ್ನು ಗಮನಿಸಿದರೆ ಇದರ ಹಿಂದೆ ವ್ಯವಸ್ಥಿತ ಸಾಮಾಜಿಕ ದುಂಡಾವರ್ತನೆಯಿರುವುದು ಸ್ಪಷ್ಟವಾಗುತ್ತದೆ.

ತೋಳ್ಬಲ ಮತ್ತು ರಾಜಕೀಯ ಬಲಗಳನ್ನು ಬಿಟ್ಟು ಎಲ್ಲರೂ ಒಂದಾಗಿ ಪ್ರಾಂಜಲ ಮನಸ್ಸಿನಿಂದ ಧಾರ್ಮಿಕ ನೆಲೆಯಲ್ಲಿ ಧರ್ಮ ವಿಚಾರಗಳನ್ನು ವಿದ್ವಾಂಸರ ಜೊತೆ ಚರ್ಚಿಸಿ, ನಿರ್ಣಯವನ್ನು ತೆಗೆದುಕೊಳ್ಳುವ ಮೂಲಕ ಸಮಾಜದ ಮತ್ತು ಧಾ‌ರ್ಮಿಕ ಸ್ವಾಸ್ಥ್ಯ  ಕಾಪಾಡುವುದು ಈಗ ತೀರ ಅಗತ್ಯವಾಗಿದೆ.

ADVERTISEMENT

–ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.