ADVERTISEMENT

ಬರ ಉಸ್ತುವಾರಿ ಸಮಿತಿ ರಚಿಸಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ರಾಜ್ಯದ 123 ತಾಲ್ಲೂಕುಗಳನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿದೆ. ಈ ತಾಲ್ಲೂಕುಗಳ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಸಲು ಹಾಗೂ ಬಡ ಜನರಿಗೆ ಉದ್ಯೋಗ ಒದಗಿಸಲು ಕೆಲವು ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ.

ಬಹುತೇಕ ಬರಪೀಡಿತ ತಾಲ್ಲೂಕುಗಳಲ್ಲಿ ಹೇಳಿಕೊಳ್ಳುವಂತಹ ಪರಿಹಾರ ಕಾರ್ಯಗಳು ಆರಂಭವಾಗಿಲ್ಲ.  ಕೆಲವು ಕಡೆ ಕಾಟಾಚಾರಕ್ಕೆ ಎಂಬಂತೆ ಗೋಶಾಲೆಗಳನ್ನು ತೆರೆಯಲಾಗಿದೆ. ಮೇವು ಬ್ಯಾಂಕ್ ಸ್ಥಾಪಿಸಿ ಒಂದು ವಾರ ನಡೆಸಿದ ಉದಾಹರಣೆಗಳಿವೆ.

ಉದ್ಯೋಗ ಭರವಸೆ ಯೋಜನೆ ಸರಿಯಾಗಿ ಜಾರಿಯಾಗುತ್ತಿಲ್ಲ. ಹಿಂದೆ ಕೊರೆದ ವಿಫಲ ಬೋರ್ ವೆಲ್‌ಗಳನ್ನೇ ಹೊಸದಾಗಿ ಕೊರೆಯಲಾಗಿದೆ ಎಂದು ದಾಖಲೆ ತೋರಿಸಿ ಸುಳ್ಳು ಬಿಲ್ ತಯಾರಿಸಿ ಹಣ  ದುರುಪಯೋಗ ಮಾಡಿಕೊಂಡ ಆರೋಪಗಳು ಕೇಳಿ ಬರುತ್ತಿವೆ.
ಈ ಅವ್ಯವಹಾರಗಳಿಗೆ ಸರ್ಕಾರ ತಡೆ ಹಾಕಬೇಕು.

ತಕ್ಷಣವೇ ತಾಲ್ಲೂಕುವಾರು ಬರ ಪರಿಹಾರ ಕಾಮಗಾರಿ ಉಸ್ತುವಾರಿ ಸಮಿತಿಗಳನ್ನು ರಚಿಸಿ ಅದರ ಒಪ್ಪಿಗೆ ಇಲ್ಲದೆ ಹಣ ಖರ್ಚು ಮಾಡದಂತೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಈ ಸಮಿತಿಗಳಿಗೆ ತಾಲ್ಲೂಕಿನ ಪ್ರಾಮಾಣಿಕ ವ್ಯಕ್ತಿಗಳನ್ನು ನೇಮಿಸಬೇಕು. ಸರ್ಕಾರ ತಕ್ಷಣವೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.