ADVERTISEMENT

ಬಸ್ ನಿಲುಗಡೆ ಬೇಕು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಮತ್ತು ಶಿವಾಜಿನಗರ ಮಾರ್ಗವಾಗಿ ಚಲಿಸುವ ಬಿ.ಎಂ.ಟಿ.ಸಿ. ಬಸ್ ನಿಲುಗಡೆಯನ್ನು ಪುನಃ ಎಸ್.ಬಿ.ಐ. ಮುಂಭಾಗದಲ್ಲಿ (ಮಣಿಪಾಲ್ ಆಸ್ಪತ್ರೆಯ ಹತ್ತಿರ) ಪ್ರಾರಂಭಿಸಬೇಕು ಎಂದು ರಾಷ್ಟ್ರೀಯ ವೈಮಾಂತಿರಿಕ್ಷ ಪ್ರಯೋಗ ಶಾಲೆಗಳು (ಎನ್. ಎ. ಎಲ್.), ಕೋಡಿಹಳ್ಳಿ ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವರ್ಗ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ವಾಹನ ನಿಲುಗಡೆಯನ್ನು ಪುನರ್ ಸ್ಥಾಪಿಸಿದಲ್ಲಿ, ನಮಗೆ ಮಾತ್ರವಲ್ಲದೆ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು, ಆಸ್ಪತ್ರೆಯ ಸಿಬ್ಬಂದಿ, ಇಸ್ರೋ ಸಂಸ್ಥೆಯ ಉದ್ಯೋಗಿ ಮತ್ತು ಅಕ್ಕಪಕ್ಕದ ನಾಗರಿಕರಿಗೆ ತುಂಬಾ ಅನುಕೂಲವಾಗುತ್ತದೆ. ಈ ಬಗ್ಗೆ ಬಿ.ಎಂ.ಟಿ.ಸಿ.ಯ ಅಧಿಕಾರಿಗಳು ನಮ್ಮ ಮನವಿಯನ್ನು ಪುರಸ್ಕರಿಸಿ ಇಲ್ಲಿ ಬಸ್‌ಗಳ ನಿಲುಗಡೆ ಮಾಡುವರೆಂದು ನಂಬಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT