ADVERTISEMENT

ಬೆಲೆ ಏರಿಕೆಗೆ ಕಡಿವಾಣವಿಲ್ಲವೆ?

ಪ್ರೊ.ಕೃಷ್ಣನಾಯಕ
Published 12 ಫೆಬ್ರುವರಿ 2013, 19:59 IST
Last Updated 12 ಫೆಬ್ರುವರಿ 2013, 19:59 IST

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ  ಸಾಮಾನ್ಯ ಜನರನ್ನು ಕಾಡುತ್ತಿದೆ. ಮೇಲ್ವರ್ಗದವರಿಗೆ  ಏರಿಕೆಯ ಬಿಸಿ ತಟ್ಟಲಾರದು. ಮಧ್ಯಮವರ್ಗದವರಿಗೆ ಜೀವನ ನಡೆಸಲು ಕಷ್ಟ. ಅವರ ಜೀವನ ಏರು ಪೇರಾಗುತ್ತದೆ.

ಕೆಳವರ್ಗದ ಅಂದರೆ ಕಡುಬಡವರ, ಕಾರ್ಮಿಕರ ಜೀವನವನ್ನು ದುಸ್ತರಕ್ಕೀಡು ಮಾಡಿರುವ ಸ್ಥಿತಿಯನ್ನು ನೆನಸಿಕೊಂಡರೆ ಅಯ್ಯೋ ಎನಿಸುತ್ತದೆ. ಜೀವನಾವಶ್ಯಕ ಪದಾರ್ಥಗಳಾದ ಅಕ್ಕಿ, ಬೇಳೆ, ಎಣ್ಣೆ, ಕಾಳು, ಬಟ್ಟೆ, ಮಕ್ಕಳ ಖರ್ಚು ಹೀಗೆ ಇವೆಲ್ಲವೂ ಅವರನ್ನು ಹಿಂಡುತ್ತಿದೆ. ಸರ್ಕಾರ ಇದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮುಗ್ಗುರಿಸಿದೆಯೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT