ADVERTISEMENT

ಬ್ಯಾಂಕುಗಳಲ್ಲಿ ಕನ್ನಡ ಅರ್ಜಿಗಳಿಲ್ಲ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಎಲ್ಲರಿಗೂ ಬ್ಯಾಂಕಿನ ಸೌಲಭ್ಯಗಳು ಒದಗುವಂತಾಗಬೇಕು ಎಂಬುದು ಹಣಕಾಸು ಸಚಿವರ ಆಶಯ. ಹೆಚ್ಚು ಜನರಿಗೆ ಬ್ಯಾಂಕು ವ್ಯವಸ್ಥೆ ತಲುಪಿಸಲು ಕೆಲಸ ಮಾಡುವುದಾಗಿ ಬ್ಯಾಂಕ್‌ಗಳ ವರಿಷ್ಠ ಅಧಿಕಾರಿಗಳೂ ಹೇಳುತ್ತಾರೆ. ಆದರೆ, ಜನರ ಭಾಷೆಯನ್ನೇ ಬಿಟ್ಟು, ಜನರನ್ನು ತಲುಪಲು ಬ್ಯಾಂಕುಗಳು ಹೊರಟಂತಿದೆ.

ಬೆಂಗಳೂರಿನ ಹೆಚ್ಚಿನ ಬ್ಯಾಂಕುಗಳಲ್ಲಿ ಕನ್ನಡದ ಒಂದೂ ಅರ್ಜಿ ನಮೂನೆಗಳಿಲ್ಲ. ಇರುವ ಎಲ್ಲಾ ಅರ್ಜಿಗಳೂ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಮಾಹಿತಿ ಹೊಂದಿರುತ್ತವೆ. ಜನರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವಂತೆ ವ್ಯವಸ್ಥೆ ಬ್ಯಾಂಕುಗಳಲ್ಲಿ ರೂಪಿಸಬೇಕಾಗಿದೆ. ಆಗ ಮಾತ್ರ, ಬ್ಯಾಂಕು ಕೊಡಮಾಡುವ ಎಲ್ಲಾ ಸವಲತ್ತುಗಳನ್ನೂ ಜನರು ಬಳಸಿಕೊಳ್ಳಬಲ್ಲರು. ಜನರ ಭಾಷೆಯ ಬಳಕೆ ಮಾಡದೇ, ಜನರನ್ನು ತಲುಪಲು ಸಾಧ್ಯವಾಗುವುದಿಲ್ಲ ಎಂಬುದನ್ನು ಬ್ಯಾಂಕುಗಳು ಅರಿಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT