ADVERTISEMENT

ಭರವಸೆಯ ಬೆಳಕು

ಬಿ.ಎಂ.ರಾಘವೇಂದ್ರ, ಬುಕ್ಕಾಂಬುಧಿ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ಆಮ್ ಆದ್ಮಿ ಪಾರ್ಟಿ ಸ್ಥಾಪನೆಯಿಂದ  ಹೊಸದೊಂದು ಕನಸು ಮತ್ತೊಮ್ಮೆ ಮೂಡಿದೆ. ಸುಮಾರು 20 ವರ್ಷಗಳ ಹಿಂದೆ ಇದೇ ರೀತಿಯ ಅನುಭವ ಒಬ್ಬ ಶ್ರೀಸಾಮಾನ್ಯನಿಗೆ ಆಗಿರಬಹುದು.

ಏಕೆಂದರೆ ದೇಶದಲ್ಲಿ ಕಾಂಗ್ರೆಸ್ಸೇತರ ರಾಷ್ಟ್ರೀಯ ಪಕ್ಷ ಬಿಜೆಪಿ ಸ್ಥಾಪನೆಯು ಹೆಚ್ಚು ಕಡಿವೆು ಇದೇ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿತ್ತು. ಆದರೆ ಆದದ್ದೇ ಬೇರೆ.
ಕಾಂಗ್ರೆಸ್ ಪಕ್ಷದವರಿಗಿಂತ ಕಡಿಮೆಯೇನಿಲ್ಲ ಎನ್ನುವ ಮಟ್ಟಿಗೆ ಭ್ರಷ್ಟಾಚಾರ ಈ ಬಿಜೆಪಿ ಪಕ್ಷದ ಆಡಳಿತ ಸರ್ಕಾರದಲ್ಲಿ ಹಾಗೂ ಪಕ್ಷದವರಲ್ಲಿ ಕಾಣುತ್ತಿದ್ದೇವೆ.

ಆದರೂ ಅರವಿಂದ ಕೇಜ್ರಿವಾಲ್ ಅವರ ಪ್ರಾಮಾಣಿಕ ಹಾಗೂ ಕೆಚ್ಚೆದೆಯ ಹೋರಾಟ ಮತ್ತು ಅಣ್ಣಾ ಹಜಾರೆ ಸೇರಿದಂತೆ ಇತರ ಪ್ರಾಮಾಣಿಕ ವ್ಯಕ್ತಿಗಳ ಒಡನಾಟದೊಂದಿಗೆ ಮುನ್ನುಗ್ಗುತ್ತಿರುವ ಈ ಪಕ್ಷದಲ್ಲಿ ಏನೋ ಹೊಸತು ಕಾಣಬಹುದೆಂದು ಶ್ರೀಸಾಮಾನ್ಯನ ಮನಸ್ಸಿನಲ್ಲಿ ಭರವಸೆಯ ಬೆಳಕು ಮೂಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT