ADVERTISEMENT

ಭಾವನಾತ್ಮಕ ಸಂಬಂಧ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST

ರಾಜ್ಯದಲ್ಲಿ ಹೊಸ ಜಿಲ್ಲೆಗಳ ರಚನೆಯ ಸಂದರ್ಭದಲ್ಲಿ ಈ ಭಾಗದ ಜನರ ವಿರೋಧದ ನಡುವೆಯೂ ಹರಪನಹಳ್ಳಿ ತಾಲೂಕನ್ನು 1997ರ ಆಗಸ್ಟ್ 15 ರಂದು ನೂತನ ದಾವಣಗೆರೆ ಜಿಲ್ಲೆಯಲ್ಲಿ ವಿಲೀನಗೊಳಿಸಲಾಯಿತು. ಈ ತಾಲ್ಲೂಕು ವಿಜಯನಗರ ಅರಸರ ಕಾಲದಲ್ಲಿ ಈ ಸಾಮ್ರಾಜ್ಯದ ಭಾಗವಾಗಿತ್ತು.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹರಪನಹಳ್ಳಿಯನ್ನು ಆಳಿದ ಪಾಳೆಗಾರ ಒಂದನೇ ಸೋಮಶೇಖರ ನಾಯಕ, ಈಗ ತುಂಗಭದ್ರ ಜಲಾಶಯದಲ್ಲಿ ಮುಳುಗಡೆಯಾಗಿರುವ ನಾರಾಯಣದೇವರ ಕೆರೆಯನ್ನು (ಹೊಸಪೇಟೆ ತಾಲ್ಲೂಕು) ತನ್ನ ಎರಡನೇ ರಾಜಧಾನಿ ಮಾಡಿಕೊಂಡಿದ್ದ ಎಂಬ ಅಂಶ ಶಾಸನದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ನೂರಾರು ವರ್ಷಗಳಿಂದ ಹರಪನಹಳ್ಳಿ ತಾಲ್ಲೂಕು ವಿಜಯನಗರ ಪ್ರದೇಶದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಅದನ್ನು ಪುನಃ ಬೆಸೆಯುವ ಪ್ರಯತ್ನ ಸರಿಯಾದ ನಡೆ.

– ವೈ.ಯಮುನೇಶ್, ಹೊಸಪೇಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.