ADVERTISEMENT

ಮತದಾನದ ಹಕ್ಕಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಜನವರಿಯಲ್ಲಿ ರಾಜ್ಯದ ಮತದಾರರ ಪಟ್ಟಿಯನ್ನು ಪರಿಷ್ಕರಿಸಿರುವ ಚುನಾವಣಾ ಆಯೋಗವು ಬೆಂಗಳೂರು ನಗರದಲ್ಲಿಯೇ ಸುಮಾರು 14 ಲಕ್ಷ ಮತದಾರರ ಹೆಸರನ್ನು  ಕೈ ಬಿಟ್ಟ ಆಘಾತಕಾರಿ ಮಾಹಿತಿ ನೀಡಿದೆ.
 
ನಗರದ ಅನೇಕ ವಿಧಾನ ಸಭಾ ಕ್ಷೇತ್ರಗಳಲ್ಲಿನ ವಿಭಾಗಾವಾರು ಪಟ್ಟಿಯನ್ನು ಪರಿಶೀಲಿಸಿದರೆ ಈ ಪ್ರಮಾಣ ಇನ್ನೂ ಅಧಿಕವಾಗಿರುವುದು ಕಂಡುಬರುತ್ತದೆ. ಬೆಂಗಳೂರು ನಗರದಲ್ಲಿಯೇ ಸರಾಸರಿ ಶೇಕಡಾ 30 ರಿಂದ 40 ರಷ್ಟು ಮತದಾರರ ಹೆಸರನ್ನು ಪರಿಷ್ಕೃತ ಪಟ್ಟಿಯಿಂದ ತೆಗೆದುಹಾಕಲಾಗಿದೆ.
 
ನಿರಂತರ ಪರಿಷ್ಕರಣೆಯಲ್ಲಿ ಸುಮಾರು ಶೇ 2 ರಿಂದ 10 ಏರಿಳಿಕೆಯಾಗುತ್ತಿದ್ದು, ಈ ವಿಶೇಷ ಪರಿಷ್ಕರಣೆಯಲ್ಲಿ ಈ ಆಘಾತಕಾರಿ ಮಟ್ಟ ತಲುಪಿರುವುದು ಆತಂಕ ಸೃಷ್ಟಿಸಿದೆ. 
ಈ ಬೃಹತ್ ಮಟ್ಟದಲ್ಲಿ ಮತದಾರರ ಹಕ್ಕನ್ನು ಕಸಿದುಕೊಂಡಿರುವುದನ್ನು ಪ್ರಶ್ನಿಸಿದರೆ,

ಆಯೋಗದವರ ಸಮಜಾಯಿಷಿ: ಬಹುತೇಕ ಮಂದಿ ತಮ್ಮ ಭಾವಚಿತ್ರ ದಾಖಲಿಸದೇ ಇರುವುದು, ಸಿಬ್ಬಂದಿ ಮನೆಗಳಿಗೆ ಪರಿಶೀಲನೆಗೆ ಬಂದಾಗ ಮನೆಗೆ ಬೀಗ ಹಾಕಿರುವುದು, ಮರಣ, ಸ್ಥಳಾಂತರ ಮುಂತಾದವು ಎನ್ನುವುದು. ಇನ್ನು ಅನೇಕ ಮನೆಗಳಲ್ಲಿ ಮನೆಯವರೆಲ್ಲರೂ ಕೆಲಸ ಅಥವಾ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿರುವಾಗ, ಅವರ ಮನೆಗಳಿಗೆ ಬೀಗ ಹಾಕಿರುವುದನ್ನೇ ನೆಪವಾಗಿಟ್ಟುಕೊಂಡು ಅವರ ಹೆಸರನ್ನು ಕೈಬಿಟ್ಟಿರುವುದು ದುರದೃಷ್ಟಕರ ಹಾಗೂ ನ್ಯಾಯವಲ್ಲ.
 
ಇದಕ್ಕೆ ಪರಿಹಾರವಾಗಿ ಆಯೋಗದವರು ಸೂಚಿಸುವುದು, ಎಲ್ಲ ಮತದಾರರು ತಮ್ಮ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಸಂಬಂಧಪಟ್ಟ ಪಾಲಿಕೆಯ ವಾರ್ಡ್ ಆಫೀಸಿನಲ್ಲಿರುವ ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿ, ಇಲ್ಲವಾದಲ್ಲಿ ಪುನಃ ನಮೂನೆ 6 ರಲ್ಲಿ ಅರ್ಜಿ 2 ಭಾವಚಿತ್ರ ಹಾಗೂ ವಯಸ್ಸು ಮತ್ತು ವಿಳಾಸವನ್ನು ದೃಢೀಕರಿಸುವ ದಾಖಲೆಗಳೊಂದಿಗೆ ಸಲ್ಲಿಸಬೇಕೆಂಬುದು. ಆದರೆ, ತಾವು ಮಾಡದ ತಪ್ಪಿಗಾಗಿ ಈ ಬೃಹತ್ ಪ್ರಮಾಣದಲ್ಲಿ ಬೆಂಗಳೂರಿನ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಎಷ್ಟರಮಟ್ಟಿಗೆ ಸಮಂಜಸ?
 -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.