ADVERTISEMENT

ಮನೆಗೆ ಬೆಂಕಿ ಬಿದ್ದಾಗ...

ಕೌಡ್ಲೆ ರವಿ ಬೆಂಗಳೂರು
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಮನೆಗೆ ಬೆಂಕಿ ಬಿದ್ದರೆ ಆ ಬೆಂಕಿಯಿಂದಲೇ ಬೀಡಿ, ಸಿಗರೇಟ್ ಹೊತ್ತಿಸಿಕೊಂಡು ಆನಂದಿಸುವ ಜನ, ಈ ರಾಜಕಾರಣಿಗಳು, ಮೊನ್ನೆ ಇಡೀ ಬೆಂಗಳೂರು ಜನತೆ ಬಾಂಬ್ ಸ್ಫೋಟದಿಂದ ಭಯಭೀತರಾಗಿದ್ದರೆ, ಇತ್ತ ರಾಜಕೀಯ ನಾಯಕರುಗಳು ಈ ವಿಷಯವನ್ನು ರಾಜಕೀಯಗೊಳಿಸಿ ಇದರ ಅನುಕಂಪದಿಂದ ಮತಗಳಿಸಲು ಪ್ರಯತ್ನಿಸುತ್ತಿದ್ದುದು ಮಾತ್ರ ಲಜ್ಜೆಗೆಟ್ಟ ತನಕ್ಕೆ ಹಿಡಿದ ಕನ್ನಡಿಯಂತಿತ್ತು.

ಒಬ್ಬ ರಾಜಕಾರಣಿ ಆ ಪಕ್ಷದವರು ಈ ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟು ಓಟು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದೆ ಎಂತಲೂ, ಇನ್ನೊಂದೆಡೆ ಇನ್ನೊಂದು ಪಕ್ಷ ಇದು ನಮ್ಮನ್ನು ಗುರಿಯಾಗಿಸಿಕೊಂಡು ನಮ್ಮ ಪಕ್ಷದ ಕಚೇರಿಯ ಮುಂದೆ ನಡೆಸಿರುವ ಈ ಕೃತ್ಯಕ್ಕೆ ಮತ್ತೊಂದು ರಾಷ್ಟ್ರೀಯ ಪಕ್ಷವೇ ಹೊಣೆ ಎಂದು ಹೇಳುವ ಮುಖೇನ ಮತದಾರರಲ್ಲಿ ಅನುಕಂಪ ಹುಟ್ಟಿಸುವ ಮಾತನಾಡುತ್ತಿದ್ದರು, ಇವೆಲ್ಲವನ್ನು ನೋಡಿದರೆ ಇವರ ಸ್ವಾರ್ಥ ರಾಜಕಾರಣ ಎದ್ದು ಕಾಣುತ್ತದೆ.  ಇವರಿಗೆ ದೇಶ, ರಾಜ್ಯ, ನಗರ ಮತ್ತು ನಗರವಾಸಿಗಳು ಮುಖ್ಯವಲ್ಲ. ಮತವೊಂದೆ ಮುಖ್ಯ. 
-ಕೌಡ್ಲೆರವಿ, ಬೆಂಗಳೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.