
ಪ್ರಜಾವಾಣಿ ವಾರ್ತೆಬೇಲೂರು, ಹಳೇಬೀಡಿನ ದೇವಾಲಯಗಳ ಶಿಲ್ಪಕಲೆ ಜಗತ್ಪ್ರಸಿದ್ಧ. ಈ ದೇವಸ್ಥಾನಗಳು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗುವ ಅರ್ಹತೆ ಪಡೆದಿವೆ. ಆದರೆ ಈ ಎರಡೂ ದೇವಸ್ಥಾನಗಳಲ್ಲಿ ಇರುವ ಶಿಲಾ ವಿಗ್ರಹಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಸಹಜ ಹೊಳಪನ್ನು ಕಳೆದುಕೊಂಡಿವೆ.
ದೇವಸ್ಥಾನದ ಒಳ ಭಾಗದಲ್ಲಿ ಯಾವಾಗಲೂ ಕತ್ತಲು ಇರುತ್ತದೆ. ದೂರದ ಊರುಗಳಿಂದ ಬರುವ ಪ್ರವಾಸಿಗರು ಶಿಲ್ಪ ಕಲೆಯ ಕುಸುರಿ ಸೂಕ್ಷ್ಮಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ.
ಅಲ್ಲಿ ಸರಿಯಾದ ಮಾರ್ಗದರ್ಶಿಗಳೂ ಇಲ್ಲ. ಸರ್ಕಾರ ಈ ಎರಡೂ ಅಪೂರ್ವ ದೇವಸ್ಥಾನಗಳನ್ನು ಉಪೇಕ್ಷಿಸಿದೆ ಎಂಬ ಭಾವನೆ ಅಲ್ಲಿಗೆ ಹೋದವರಿಗೆ ಆಗುತ್ತದೆ.
ಸಂಬಂಧಪಟ್ಟ ಇಲಾಖೆಯವರು ಅಲ್ಲಿನ ನ್ಯೂನತೆಗಳನ್ನು ಸರಿಪಡಿಸುವ ಕಡೆಗೆ ಗಮನ ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.