ADVERTISEMENT

ಮಾಸಾಶನ ನೀಡಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST

ಕಳೆದ ಕೆಲವು ತಿಂಗಳುಗಳಿಂದ ಸರ್ಕಾರವು ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಮಾಸಾಶನವನ್ನು ಬಿಡುಗಡೆ ಮಾಡಿಲ್ಲ. ವಿಧಾನಸಭಾ ಚುನಾವಣೆಗಳ ಕಾರಣಕ್ಕೆ ತಡವಾಗಿರಬಹುದು ಎಂದು ಕಳೆದ ತಿಂಗಳವರೆಗೂ ಎಲ್ಲರೂ ಸುಮ್ಮನಿದ್ದರು. ಈಗ ಚುನಾವಣೆ ಮುಗಿದು ಎರಡು ವಾರಗಳಾಗಿವೆ. ಇನ್ನೂ ಪಂಚಣಿ ಬಂದಿಲ್ಲ.

ಎಷ್ಟೋ ವೃದ್ಧರು, ವಿಧವೆಯರು ಸರ್ಕಾರದ ಪಿಂಚಣಿ, ಮಾಸಾಶನಗಳನ್ನೇ ಅವಲಂಬಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇವರ ಕಷ್ಟವನ್ನು ಅರ್ಥ ಮಾಡಿಕೊಂಡು ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪಿಂಚಣಿಯನ್ನು ಹೆಚ್ಚಿಸುವುದಾಗಿ ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ಹೇಳಿಕೆ ಕೊಟ್ಟಿದ್ದರು. ಆ ಭರವಸೆಯನ್ನು ಶೀಘ್ರ ಈಡೇರಿಸಬೇಕು ಎಂಬುದು ಪಿಂಚಣಿದಾರರ ಅಪೇಕ್ಷೆಯಾಗಿದೆ.

– ಸಂಜೀವಕುಮಾರ ಎಸ್., ನಿಡಗುಂದ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.