
ವಿಲ್ಸನ್ ಗಾರ್ಡನ್‌ನ ಬಿಟಿಎಸ್ ಮುಖ್ಯರಸ್ತೆ ಆಡುಗೋಡಿ ಅಂಚೆ ಕಚೇರಿಯ ಹತ್ತಿರ ಇರುವ ಮ್ಯಾನ್‌ಹೋಲ್ ಅನೇಕ ವರ್ಷಗಳಿಂದ ತೆರೆದೇ ಇದೆ. ಈಗ ಈ ಮ್ಯಾನ್‌ಹೋಲ್‌ನಿಂದ ಚರಂಡಿ ನೀರು ಹೊರಬರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.
ಅಲ್ಲದೆ ಇಲ್ಲಿ ಓಡಾಡುವ ಶಾಲಾಮಕ್ಕಳು, ಹಿರಿಯನಾಗರಿಕರು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ 21–9–2013ರಂದು ಪತ್ರ ಬರೆಯಲಾಗಿದೆ. ಇದಾಗಿ ಎರಡು ತಿಂಗಳು ಕಳೆದಿದ್ದರೂ ಈವರೆಗೆ ಯಾರೂ ಕ್ರಮ ಕೈಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.