ಗಣಿಕಪ್ಪ ಪಡೆದವರೆನ್ನಲಾದ ಸಂಬಂಧ `ಪ್ರಜಾವಾಣಿ~ ಕೆಲ ದಿನಗಳ ಹಿಂದೆ ಪ್ರಕಟಿಸಿದ ವರದಿಗಳನ್ನು ನೋಡಿ ಸಖೇದಾಶ್ಚರ್ಯವಾಯಿತು.
`ಗಣಿ ಕಪ್ಪ~ ಸಂದದ್ದು ಯಾರು ಯಾರಿಗೆ? ಎಂಬ ತಲೆಬರಹದ ಆ ಸುದ್ದಿಯಲ್ಲಿರುವ ಹಲವು `ಗಣ್ಯರ~ ಹೆಸರುಗಳನ್ನು ಓದಿ ಯಡಿಯೂರಪ್ಪನವರು ಸಂತರಂತೆ ಗೋಚರಿಸಿದ್ದು ಅಚ್ಚರಿ.
ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಗಮನಿಸಿದರೆ ಯಡಿಯೂರಪ್ಪನವರು ಸಂತರಲ್ಲದೆ ಇನ್ನೇನು ಎನಿಸುತ್ತದೆ! ಇದನ್ನು ಓದಿ, ಹನ್ನೆರಡನೇ ಶತಮಾನದ ಬಸವಣ್ಣನವರು ಬರೆದ ಒಂದು ವಚನ ನೆನಪಾಯಿತು.
ಏರಿ ನೀರುಂಬೊಡೆ
ತಾಯ ಹಾಲು ವಿಷವಾದೊಡೆ
ಬೇಲಿ ಎದ್ದು ಹೊಲ ಮೆಯ್ದ್‌ಡೆ
ಇನ್ನಾರಿಗೆ ದೂರುವದು
ಕೂಡಲ ಸಂಗಮದೇವಾ
ಈ ವರದಿಯಲ್ಲಿ ಕಾಣಿಸಿಕೊಂಡವರ ಮೇಲೆಯೂ ತನಿಖಾ ಸಂಸ್ಥೆಯು ಕ್ರಮ ಕೈಕೊಳ್ಳಬೇಕು. ಇದನ್ನು ಉದಾಸೀನ ಮಾಡಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.