ADVERTISEMENT

ರಸ್ತೆಗಳನ್ನು ಸರಿಪಡಿಸಿ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST

ಸಂಪಂಗಿ ರಾಮನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಮಲ್ಯ ಆಸ್ಪತ್ರೆ ಕಡೆಯಿಂದ ಬಲಭಾಗದಲ್ಲಿ ಶಾಂತಿನಗರಕ್ಕೆ ಹೋಗುವ ರಸ್ತೆಯಂತೂ ತೀರಾ ಹದಗೆಟ್ಟಿದೆ.

ಈ ರಸ್ತೆಗಳ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗ ಇಲ್ಲದೇ ಇರುವುದರಿಂದ, ಪಾದಚಾರಿಗಳ ಮೈಮೇಲೆಯೇ ವಾಹನಗಳು ನುಗ್ಗಿ ಬರುತ್ತವೆ. ಮಳೆ ಬಂದಾಗಲಂತೂ ವಾಹನ ಸವಾರರು ಮತ್ತು ಪಾದಚಾರಿಗಳ ಪಾಡು ಹೇಳ ತೀರದು. ಸಂಬಂಧಿಸಿದವರು ಈ ಬಗ್ಗೆ ಸೂಕ್ತ ಕ್ರಮ ವಹಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.