ADVERTISEMENT

ರಸ್ತೆ ಅಗಲಿಸಿ

ಕುಂದು ಕೊರತೆ

ಬೈರಮಂಗಲ ರಾಮೇಗೌಡ
Published 7 ಸೆಪ್ಟೆಂಬರ್ 2015, 19:48 IST
Last Updated 7 ಸೆಪ್ಟೆಂಬರ್ 2015, 19:48 IST

ರಾಜರಾಜೇಶ್ವರಿ ನಗರದಿಂದ ಹೊಸಕೆರೆಹಳ್ಳಿ ವ್ಯಾಪ್ತಿಯ ರಿಂಗ್‌ ರಸ್ತೆಗೆ ಸಂಪರ್ಕ ಕಲ್ಪಿಸಬೇಕಾದ 60 ಅಡಿ ರಸ್ತೆ ಬಂಗಾರಪ್ಪನ ನಗರಕ್ಕೆ ಬಂದು, ಅಲ್ಲೇ ನಿಂತುಹೋಗಿ ಎರಡು ವರ್ಷಗಳೇ ಕಳೆದಿವೆ.

ಕೃಷ್ಣಪ್ಪ ಲೇಔಟ್‌ನಿಂದ ಕೆರೆಕೋಡಿ, ಡಿಸೋಜನಗರ ಮೂಲಕ ವೀರಭದ್ರನಗರದಲ್ಲಿ ರಿಂಗ್‌ ರಸ್ತೆಗೆ ಕೂಡಿಕೊಳ್ಳುವ ರಸ್ತೆ ಅತ್ಯಂತ ಕಿರಿದಾಗಿದ್ದು, ಹೆಚ್ಚಿನ ಸಂಖ್ಯೆಯ ವಾಹನಗಳು ಅಲ್ಲಿ ಸಂಚರಿಸುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಟ್ರಾಫಿಕ್‌ ಜಾಮ್‌ ನಿತ್ಯದ ಗೋಳಾಗಿದೆ. ಈ ರಸ್ತೆಯ ಎರಡೂ ಬದಿಗಳಲ್ಲಿ ವರ್ಕ್‌ಶಾಪ್‌,  ವೈನ್‌ಶಾಪ್‌, ಮಾಂಸದಂಗಡಿ, ಬೇಕರಿ ಇತ್ಯಾದಿ ಅನಧಿಕೃತವಾಗಿ ತಲೆಯೆತ್ತಿದ್ದರೂ ಟ್ಯಾಕ್ಸಿ ಮತ್ತು ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಕ್ರಮ ಕೈಗೊಂಡಿಲ್ಲ.

ಸಂಬಂಧಿಸಿದವರು ಈ ರಸ್ತೆಯನ್ನು ಅಗಲಗೊಳಿಸಲು ಕೂಡಲೆ ಕ್ರಮ ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ, ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.