ADVERTISEMENT

ರೇವ್ ಪಾರ್ಟಿಗೆ ವಿರೋಧವೇಕೆ?

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಸೇಂಟ್ ಮೇರಿಸ್ (ಉಡುಪಿ ಜಿಲ್ಲೆ) ದ್ವೀಪದಲ್ಲಿ ನಡೆದ ರೇವ್ ಪಾರ್ಟಿಯಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆ ಆಗಿದೆ ಎಂದು ಅಷ್ಟಮಠಗಳು ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪೇಜಾವರ ಶ್ರೀಗಳು ಇತ್ತೀಚೆಗೆ ಹಾವೇರಿಯಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳಲಾಗುವ ಕರಾವಳಿ ಪ್ರವಾಸೋದ್ಯಮ ನಮ್ಮ ಸಂಸ್ಕೃತಿಗೆ ಅಪಚಾರ ಎಂದು ಹೇಳಿದ್ದಾರೆ.

ಕರಾವಳಿ ಜಿಲ್ಲೆಗಳ ಉದ್ಯಮಿಗಳು ಇಡೀ ರಾಜ್ಯದಲ್ಲಿ  ಲಾಡ್ಜ್, ಬಾರ್ ಇತ್ಯಾದಿಗಳನ್ನು ನಡೆಸುತ್ತಿದ್ದಾರೆ. ಗೋವಾ, ಮುಂಬಯಿ, ದುಬೈ, ಪುಣೆ, ಬೆಂಗಳೂರಿನಲ್ಲಿರುವ ಬಹುತೇಕ ಬಾರ್‌ಗಳು ಈ ಉದ್ಯಮಿಗಳದ್ದೇ ಆಗಿವೆ. ಅಲ್ಲಿಯೂ ನಡೆಯುವುದು ಕುಡಿತವೇ. ಕೆಲವು ಬಾರ್‌ಗಳಲ್ಲಿ  ನಂಗಾನಾಚ್ ಪಾರ್ಟಿಗಳು ನಡೆಯುತ್ತವೆ. ಒಟ್ಟಾರೆ ಇವು ನಮ್ಮ ಸಂಸ್ಕೃತಿಗೆ ವಿರುದ್ಧವಾದ ಚಟುವಟಿಕೆಗಳೇ ಅಲ್ಲವೆ?

ಇಂತಹ ಬಾರ್, ಲಾಡ್ಜ್ ನಡೆಸುವ ಉದ್ಯಮಿಗಳೇ ಮಠ ಮಾನ್ಯಗಳ ಚಟುವಟಿಕೆಗಳಿಗೆ ಹಣ ಕೊಡುತ್ತಾರೆ. ಇಂತಹ ಹಣವನ್ನು ನಿರಾಕರಿಸದ ಮಠ ಮಾನ್ಯಗಳು ರೇವ್ ಪಾರ್ಟಿಯನ್ನು ವಿರೋಧಿಸುವ ತರ್ಕ ಅರ್ಥವಾಗುವುದಿಲ್ಲ.
 
ಭಾರತೀಯರು ವಿದೇಶಗಳಲ್ಲಿ ಮೋಜು ಮಸ್ತಿ ಮಾಡಿದರೆ ಅದಕ್ಕೆ ನಮ್ಮ ಮಠಗಳ ವಿರೋಧ ಇಲ್ಲ. ಆದರೆ ನಮ್ಮಲ್ಲಿ ಅಂಥ ಪಾರ್ಟಿಗಳು ನಡೆಯಬಾರದು ಎನ್ನುವುದರ ಉದ್ದೇಶವಾದರೂ ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.