ADVERTISEMENT

ರೈಲ್ವೆ ಪ್ರಗತಿಗೆ ಅಡ್ಡಗಾಲು

ಮುರಲೀಧರ ಕುಲಕರ್ಣಿ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ರೈಲ್ವೆ ಮಂತ್ರಿ ದಿನೇಶ್ ತ್ರಿವೇದಿ ರೈಲು ಪ್ರಯಾಣ ದರ ಹೆಚ್ಚಳ ಮಾಡಿದ ಕಾರಣಕ್ಕಾಗಿ ಅವರು ರಾಜಿನಾಮೆ ಕೊಡುವ ಪರಿಸ್ಥಿತಿಯನ್ನು ಮಮತಾ ಬ್ಯಾನರ್ಜಿ ನಿರ್ಮಾಣ ಮಾಡಿದ್ದು ಕೆಟ್ಟ ರಾಜಕಾರಣ.

8 ವರ್ಷಗಳ ನಂತರ ಸ್ವಲ್ಪ ಪ್ರಯಾಣ ದರ ಹೆಚ್ಚಸಿದ್ದರಿಂದ ಜನರಿಗೆ ಹೆಚ್ಚಿನ ಹೊರೆ ಆಗುತ್ತಿರಲಿಲ್ಲ. ಆದರೂ ಮಮತಾ ಬ್ಯಾನರ್ಜಿ ದರ ಹೆಚ್ಚಳಕ್ಕೆ ತ್ರಿವೇದಿ ಅವರನ್ನು ಹೊಣೆ ಮಾಡಿದ್ದಾರೆ.

ರೈಲ್ವೆ ವ್ಯವಸ್ಥೆಯ ಆಧುನೀಕರಣ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಅದಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಪ್ರಯಾಣಿಕರಿಂದ ಸಂಗ್ರಹಿಸುವುದು ತಪ್ಪೇ? ರೈಲ್ವೆ ಸುಧಾರಣೆ, ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಶುಚಿತ್ವಕ್ಕೆ ತ್ರಿವೇದಿ ಒತ್ತು ನೀಡಿದ್ದರು.
 
ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿರುವ ಪ್ರಾದೇಶಿಕ ಪಕ್ಷಗಳು ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿವೆ. ಇದರಿಂದ ತೊಂದರೆಯಾಗುವುದು ದೇಶದ ಜನರಿಗೆ ಎಂಬುದನ್ನೇ ಅವು ಮರೆತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.