
ಇನ್ನು ಮುಂದೆ ರಾಜಸ್ತಾನದಲ್ಲಿ
ನೌಕರಿಗೆ ಸೇರುವವರು
ಮದುವೆ ಆಗುವಾಗ
ಕೇಳುವಂತಿಲ್ಲ ಯಾವುದೇ
ರೂಪದ ವರದಕ್ಷಿಣೆ
ಅದು ಸಾಬೀತಾದ ದಿನ
ಕಳೆದುಕೊಳ್ಳುತ್ತಾರೆ ನೌಕರಿ!
ನಮ್ಮಲ್ಲೊ ಸರ್ಕಾರಿ ಕೆಲಸಕ್ಕೆ
ಸೇರುವಾಗಲೇ ದಕ್ಷಿಣೆ ಕೊಟ್ಟು
ಬಳಿಕ ಜನರಿಂದಲೂ ಪಡೆದು,
ಮದುವೆಯಾಗುವಾಗ
ಮಾವನಿಂದಲೂ
ಮುಲಾಜಿಲ್ಲದೆ ವಸೂಲು
ಮಾಡುವ ವಸೀಲಿವೀರರಿದ್ದಾರೆ!
ಇಂಥ ವರ ಮಹಾಶಯರಿಗೆ
ಬುದ್ಧಿಕಲಿಸಲು ಕರ್ನಾಟಕದಲ್ಲೂ
ರಾಜಸ್ತಾನದ ಮಾದರಿ
ಏಕೆ ತರಬಾರದು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.