‘ಮಾತುಕತೆ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ಸ್ಥಾಪನೆ ಸಾಧ್ಯ’ ಎಂದು ಪಾಕ್ ಪ್ರಧಾನಿ ನವಾಜ್ ಷರೀಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಆ. 16). ಇದು, ಒಳ್ಳೆಯ ಸಂದೇಶವೇ. ಆದರೆ ಸ್ವತಃ ಪಾಕಿಸ್ತಾನಕ್ಕೇ ಸ್ನೇಹ, ಸಹಕಾರದ ಬಗ್ಗೆ ವಿಶ್ವಾಸ ಇಲ್ಲವಲ್ಲ!
ಸೇನಾ ಆಡಳಿತದ ನೆರಳಲ್ಲಿರುವ ಅಲ್ಲಿನ ಪ್ರಧಾನಿಗೆ ನೈಜ ಅಧಿಕಾರವೇ ಇಲ್ಲ. ತಮ್ಮ ಕುರ್ಚಿ ಅಲುಗಾಡಲು ಆರಂಭಿಸಿದ ಕೂಡಲೇ ಅವರ ಮಾತು–ವರಸೆ ಬದಲಾಗುತ್ತದೆ. ಭಾರತದ ಜತೆ ಸಂಘರ್ಷವೇ ಕುರ್ಚಿ ಭದ್ರಪಡಿಸಿಕೊಳ್ಳುವ ಮಾರ್ಗವಾಗಿ ತೋರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.