ADVERTISEMENT

ಸಂವೇದನಾರಹಿತ ಮಾತು

ರವಿಸಾಗರ್, ಬೆಂಗಳೂರು
Published 18 ಅಕ್ಟೋಬರ್ 2015, 19:47 IST
Last Updated 18 ಅಕ್ಟೋಬರ್ 2015, 19:47 IST

ದೇಶದ ರಾಜಕಾರಣಿಗಳು ಸಂವೇದನಾಹೀನರಾಗಿ ಸಾರ್ವಜನಿಕವಾಗಿ ಹೇಳಿಕೆಗಳನ್ನು ಕೊಡುತ್ತಿರುವುದು, ಅವರನ್ನು ನಾಯಕರನ್ನಾಗಿ ಮಾಡಿದ ಪ್ರಜೆಗಳಿಗೆ ಮಾಡಿದ ಅಪಮಾನವೇ ಸರಿ.

ವರದಿಗಾರ್ತಿ ಒಬ್ಬರ ಪ್ರಶ್ನೆಗೆ ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಉತ್ತರಿಸಿರುವ ರೀತಿ ನೋಡಿದರೆ, ಇಂತಹ ನಾಯಕರನ್ನು ಹೊಂದಿದ್ದಕ್ಕೆ ರಾಜ್ಯದ ಜನರು ನಾಚಿಕೆಪಡಬೇಕಾಗಿದೆ. ತಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರು ನಾಲಗೆ ಮೇಲೆ ಪೂರ್ತಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಪಕ್ಷ ಇದನ್ನೆಲ್ಲ ನೋಡಿ ನೋಡದಂತೆ ಜಾಣ ಕಿವುಡುತನ ಪ್ರದರ್ಶಿಸುತ್ತಿದೆ.

ಇಂಥ ಪ್ರವೃತ್ತಿಗೆ ಕಡಿವಾಣ ಹಾಕುವುದು ಅಗತ್ಯ. ಈಶ್ವರಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಈ ಅವಕಾಶವನ್ನು ವರದಿಗಾರ್ತಿ ಬಳಸಿಕೊಳ್ಳಬೇಕು.  ಆಗಲೇ ಇಂತಹ ಬಾಯಿಬಡಕ ರಾಜಕಾರಣಿಗಳನ್ನು ನಿಯಂತ್ರಿಸಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.