ADVERTISEMENT

ಹಗಲು ದರೋಡೆ ನಿಲ್ಲಿಸಿ

ಶಾಂತೂ, ಗುರುಮಿಠಕಲ್
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಯಾದಗಿರಿ ಹೊಸ ಜಿಲ್ಲೆಯಾಗಿ ಎರಡೂವರೆ ವರ್ಷ ಕಳೆಯಿತು. ಈಗಲೂ ಜಿಲ್ಲೆ ಮೂಲ ಸೌಕರ್ಯಗಳಿಲ್ಲದೇ ಸೊರಗುತ್ತಿದೆ.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪಟ್ಟಣ ಹಾಗೂ ಜಿಲ್ಲೆಯಾದ್ಯಾಂತ ಅಪರಾಧ, ಕೊಲೆ, ದರೋಡೆ ಪ್ರಕರಣಗಳು ನಿರಾತಂಕವಾಗಿ ನಡೆದಿವೆ.  ಆಡಳಿತ ವ್ಯವಸ್ಥೆ ಕಣ್ಮುಚ್ಚಿ  ಕುಳಿತಿದೆ. ಇತ್ತೀಚಿನ ದಿನಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗಳ ದರೋಡೆ ಸಾಮಾನ್ಯವಾಗಿಬಿಟ್ಟಿದೆ.

ಪಟ್ಟಣದಲ್ಲಿ ಒಂದೇ ಪೊಲೀಸ್ ಠಾಣೆ ಇದೆ. ಅಪರಾಧ ತಡೆಯಲು ವಿಫಲವಾಗಿದೆ. ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಜನಸಂಖ್ಯೆಗೆ ಅನು­ಗು­ಣವಾಗಿ ಸಿಬ್ಬಂದಿ ಇಲ್ಲದಿರುವುದು ಸಮಸ್ಯೆ­ಯಾಗಿ ಪರಿಣಮಿಸಿದೆ. ಬೇಗನೇ ಜಿಲ್ಲೆಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ನಿರಾತಂಕ ಜೀವನ ನಡೆಸಲು ಸರ್ಕಾರ ಅನುವು ಮಾಡಿಕೊಡಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.