ADVERTISEMENT

ಹಾಲಿನ ದರ ಇಳಿಸಿ

ಲಕ್ಷ್ಮೀಪತಿ ಮಾವಳ
Published 18 ಫೆಬ್ರುವರಿ 2013, 19:59 IST
Last Updated 18 ಫೆಬ್ರುವರಿ 2013, 19:59 IST

ಬೆಂಗಳೂರು ಸಹಕಾರಿ ಹಾಲು ಒಕ್ಕೂಟವು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ದರಗಳನ್ನು ಹೆಚ್ಚಿಸಿ ನಗರದ ನಾಗರಿಕರಿಗೆ ಬಿಸಿ ಮುಟ್ಟಿಸಿದೆ. ನಾಗರಿಕರು ಕಂಗಾಲಾಗುವಂತೆ ಮಾಡಿರುವ ಈ ನಿರ್ಧಾರದಿಂದ ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಒಮ್ಮೆ 4 ರೂ ಹೆಚ್ಚಿಸಿ 12.2.13ರ ಸುತ್ತೋಲೆಯಲ್ಲಿ 1ರೂ ಇಳಿಕೆ ಮಾಡಿ ಹಾಲಿನ ಏಜೆಂಟರಿಗೂ ಗ್ರಾಹಕರಿಗೂ ಜಗಳ, ಮಾತಿನ ಚಕಮಕಿಗೆ ಕಾರಣವಾಗಿದೆ.

ಟೋನ್ಡ್ ಹಾಲು ಅರ್ಧ ಲೀಟರ್‌ಗೆ ರೂ 13.50, ಮೊಸರು ರೂ 15ರಿಂದ 16.50, 200 ಗ್ರಾಂ ಮೊಸರು ರೂ 7.50 ಮಾಡಿದೆ. ಮೊದಲೇ ಚಿಲ್ಲರೆ ಅಭಾವ, ಹೀಗಿರುವಾಗ ಬೆಳಗ್ಗಿನ ಹೊತ್ತು 50 ಪೈಸೆಗೆ, ಮಾತಿನ ಚಕಮಕಿ ನಡೆಯುತ್ತಿದೆ.

ಹಾಲು ಒಕ್ಕೂಟದ ಅಧಿಕಾರಿಗಳಿಗೆ ಚಿಲ್ಲರೆ ಸಮಸ್ಯೆ ತಿಳಿಯಲಿಲ್ಲವೆ? ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಹಾಲಿನ ದರವನ್ನು ರೂ 2 ಇಳಿಕೆ ಮಾಡಿದರೆ ಒಳಿತು. ಇದರಿಂದ ಚಿಲ್ಲರೆ ಸಮಸ್ಯೆಯಿಂದ ಉಂಟಾಗಿರುವ ಗೊಂದಲ ತಪ್ಪಿಸಬಹುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.