ADVERTISEMENT

ಹಿಂದಿ– ಹಿಂದುಸ್ತಾನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಹಿಂದಿ– ಹಿಂದುಸ್ತಾನ
ಹಿಂದಿ– ಹಿಂದುಸ್ತಾನ   

‘ಸರ್ಕಾರ (ಕೇಂದ್ರದಲ್ಲಿ) ಹಿಂದಿ, ಹಿಂದೂ, ಹಿಂದುಸ್ತಾನ ಎಂದು ಹೊರಟಿದೆ’ ಎಂದು ಚಂದ್ರಶೇಖರ ಪಾಟೀಲ ಅವರು ಹೇಳಿರುವ ಮಾತುಗಳು ಹಿಡಿಸಿದವು (ಪ್ರ.ವಾ., ವಾರದ ಸಂದರ್ಶನ, ಅ.1). ಇವು ಮೂರೂ ವಿಚಾರಹೀನರ ಪರಿಕಲ್ಪನೆಗಳು. ‘ಹಿಂದಿ’ ಎಂಬ ಒಂದು ನಿರ್ದಿಷ್ಟ ಭಾಷೆಯೇ ಇಲ್ಲ. ಅದೇ ಲಿಪಿ ಬಳಸುವ ಮಾತ್ರದಿಂದ ಮರಾಠಿ ಹಿಂದಿ ಆಗುತ್ತದೆಯೇ?

ತುಳಸಿದಾಸರ ರಾಮಚರಿತಮಾನಸ, ಸೂರದಾಸರ ಭಾಗವತ, ಕಬೀರರ ಕಡಿಬೋಲಿ, ರಹೀಮರ ಸಂಸ್ಕೃತಭೂಯಿಷ್ಠ ಅಭಿವ್ಯಕ್ತಿಗಳು ಹಿಂದಿ ಎನ್ನುವುದು ಮಂದಮತಿಯಷ್ಟೇ.

ಅವಧ್, ಬ್ರಜ್, ಭೋಜ್‌ಪುರಿ ಭಾಷೆಗಳಿಗೆ ಅದರದೇ ವ್ಯಕ್ತಿತ್ವ ಉಂಟು. ಹಿಂದಿ ಎಂಬ ‘ಕರೆಯದೆ ಬಂದ ನೆಂಟ’ ಅವುಗಳ ಕತ್ತು ಹಿಸುಕುತ್ತಿದ್ದಾನೆ! ಹಿಂದೂ ಧರ್ಮ ಅಥವಾ ಹಿಂದುತ್ವವು ಇಷ್ಟೇ ಕೃತಕ ಮತ್ತು ಆಧಾರಹೀನ. ಇಷ್ಟಕ್ಕೂ ಹಿಂದಿ, ಹಿಂದೂ, ಹಿಂದುಸ್ತಾನ್‌ ಎಂಬುದು ಆಕ್ರಮಣಕಾರರು ಬಳಸಿದ ತಿರಸ್ಕಾರ ವಾಚಕ. ಅದನ್ನು ಆದರದಿಂದ ತಲೆಯ ಮೇಲೆ ಹೊರುವುದು ನಾಚಿಕೆಗೇಡಿನ ಲಕ್ಷಣ!

ADVERTISEMENT

-ಆರ್.ಕೆ. ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.