ADVERTISEMENT

ಹೀಗೂ ಅರ್ಥೈಸಬಹುದು

ಗುರುಪ್ರಸಾದ್ ಕಂಟಗೆರೆತುಮಕೂರು
Published 6 ಜುಲೈ 2016, 19:30 IST
Last Updated 6 ಜುಲೈ 2016, 19:30 IST

‘ನೋಯದವರೆಂತು ಬಲ್ಲರು ನೊಂದವರ ನೋವ’ ಎಂಬ ಮಾತಿದೆ. ಅನುಭವಿಸಿದವನಿಗಷ್ಟೇ ಗೊತ್ತು ನೋವಿನ ತೀವ್ರತೆ. ಅದರ ಹೊರತಾಗಿಯೂ ಒಬ್ಬರ ನೋವನ್ನು ಇನ್ನೊಬ್ಬರು ಕೊನೇ ಪಕ್ಷ ಅರ್ಥ ಮಾಡಿಕೊಳ್ಳಲಾದರೂ ಪ್ರಯತ್ನಿಸಬಹುದು. ಬಿಳಿಯರಿದ್ದ ರೈಲು ಗಾಡಿಯಿಂದ ಗಾಂಧೀಜಿ ದಬ್ಬಿಸಿಕೊಂಡಾಗ ತಮಗಾದ ಅವಮಾನವನ್ನು ಭಾರತದ ಅಸ್ಪೃಶ್ಯರ ಸ್ಥಿತಿಗೆ ಹೋಲಿಸಿಕೊಂಡ ಹಾಗೆ.

ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಂಡಾಗ ತಮಗಾದ ಆಯಾಸವನ್ನು ಅತ್ಯಾಚಾರ ಸಂತ್ರಸ್ತೆಯ  ಸಂಕಷ್ಟಕ್ಕೆ ಹೋಲಿಸಿಕೊಂಡಿರುವ ಸಲ್ಮಾನ್‌ ಖಾನ್‌ ಅವರ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ. ಅತ್ಯಾಚಾರ ಸಂತ್ರಸ್ತೆ ದೈಹಿಕ ಮತ್ತು ಮಾನಸಿಕ ಯಾತನೆ ಎರಡನ್ನೂ ಅನುಭವಿಸುತ್ತಿರುತ್ತಾಳೆ.

ಸಲ್ಮಾನ್ ಅವರಿಗೆ ಇಲ್ಲಿ ದೈಹಿಕ ಯಾತನೆ ಮಾತ್ರವೇ ಪ್ರಧಾನವಾಗಿ, ಅವಮಾನದ ಆಯಾಮ ಇಲ್ಲವಾಗಿದೆ. ಆದರೂ ಅದರಾಚೆಗೆ ಇದೊಂದು ಅದ್ಭುತ ರೂಪಕವೇ ಸರಿ. ಸಲ್ಮಾನ್ ಖಾನ್‌ ಅವರಂತಹ ನಟನಿಗೆ ಅತ್ಯಾಚಾರ ಸಂತ್ರಸ್ತೆಯ ಯಾತನೆ ತೀವ್ರವಾಗಿ ತಟ್ಟಿದೆ ಎಂದು ಸಕಾರಾತ್ಮಕವಾಗಿ ಅದನ್ನು ತೆಗೆದುಕೊಳ್ಳಬಹುದಿತ್ತೇನೊ.

ಆದರೆ ಅವರ ಹಿಂದಿನ ಕೆಲವು ದುಂಡಾ ವರ್ತನೆಗಳು ಈಗಿನ ಪಕ್ವಗೊಂಡ ಅವರ ಮಾತುಗಳಿಗೂ ಜನ ಕಿವುಡರಾಗುವಂತೆ ಮಾಡಿ ಅನರ್ಥಕ್ಕೆ ದಾರಿ ಮಾಡಿವೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT