`ಒಂದೇ ಒಂದು ಸಲ ನಮಗೆ ಅಧಿಕಾರ ಕೊಡಿ~ ಎಂದು ಜನರಿಗೆ ಮನವಿ ಮಾಡುತ್ತಲೇ ಅಧಿಕಾರಕ್ಕೆ ಬಂದ ಬಿಜೆಪಿ, ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮಾಡಿದ್ದ ಎಲ್ಲಾ ಭ್ರಷ್ಟಾಚಾರಗಳನ್ನು 30 ತಿಂಗಳಿನಲ್ಲೇ ಮೀರಿಸುವಂತಹ ಸಾಧನೆ ಮಾಡಿದೆ. ಆ ಪಕ್ಷದ ನಾಯಕರ ಬಗ್ಗೆ ಮಾತನಾಡಲೂ ಅಸಹ್ಯ ಪಡುವಂತೆ ಆಗಿದೆ.
ಬಿಜೆಪಿ ಸರ್ಕಾರ ನ್ಯಾಯಾಲಯಗಳು, ಲೋಕಾಯುಕ್ತರಿಂದಲೂ ಛೀಮಾರಿ ಹಾಕಿಸಿಕೊಂಡಿದೆ. ಅನೇಕ ಇಲಾಖೆಗಳಲ್ಲಿ ಅವ್ಯವಹಾರ ನಡೆದಿದೆ. ಮಂತ್ರಿಗಳು ಜೈಲಿಗೆ ಹೋಗಿದ್ದಾರೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಭಯೋತ್ಪಾದಕರ ವಿರುದ್ಧ ಭಾವನೆ ಮೂಡಿಸಲು 250 ಕೋಟಿ ರೂ ಖರ್ಚು ಮಾಡಲಾಗಿದೆ ಎಂಬ ವರದಿಗಳಿವೆ. ಇದು ಒಳ್ಳೆಯ ಸರ್ಕಾರ ನಿಡುವ ಕ್ರಮವೇ?
ಬಿಜೆಪಿ ಸರ್ಕಾರದಿಂದ ಉತ್ತಮ ಸಾಧನೆ ನಿರೀಕ್ಷಿಸಿದ್ದವರಿಗೆ ಭ್ರಮ ನಿರಸನವಾಗಿದೆ. ಹಣ ಇದ್ದವರು ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರದ ಅನಾದರ ಮುಂದುವರಿದಿದೆ. ಸರ್ಕಾರಿ ಶಾಲೆಗಳನ್ನು `ಕೇಂದ್ರೀಯ ವಿದ್ಯಾಲಯ~ ಗಳಂತೆ ಮಾರ್ಪಡಿಸುವ ಅಗತ್ಯವಿದೆ. ಇದರಿಂದ ಜನ ಸಾಮಾನ್ಯರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ರಾಜ್ಯ ಸರ್ಕಾರ ಈ ಕುರಿತು ಚಿಂತಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.